ಗುಂಪಕಲ್ಲು : ದನದ ಮಾಂಸ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಮನೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ, 11 ಕೆಜಿ ಮಾಂಸ ವಶಕ್ಕೆ - Karavali Times ಗುಂಪಕಲ್ಲು : ದನದ ಮಾಂಸ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಮನೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ, 11 ಕೆಜಿ ಮಾಂಸ ವಶಕ್ಕೆ - Karavali Times

728x90

31 August 2026

ಗುಂಪಕಲ್ಲು : ದನದ ಮಾಂಸ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಮನೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ, 11 ಕೆಜಿ ಮಾಂಸ ವಶಕ್ಕೆ

ಬಂಟ್ವಾಳ, ಆಗಸ್ಟ್ 31, 2026 (ಕರಾವಳಿ ಟೈಮ್ಸ್) : ಕಾವಳಪಡೂರು ಗ್ರಾಮದ ಗುಂಪಕಲ್ಲು ಎಂಬಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ದನದ ಮಾಂಸ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು 11 ಕೆಜಿ ದನದ ಮಾಂಸ ವಶಪಡಿಸಿಕೊಂಡ ಘಟನೆ ಆಗಸ್ಟ್ 29 ರಂದು ಸಂಜೆ ನಡೆದಿದೆ. 

ಸ್ಥಳೀಯ ನಿವಾಸಿ ಸಿರಾಜ್ ಎಂಬವರ ಮನೆಯಲ್ಲಿ ಪ್ರಕರಣ ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ರನ್ನಗೌಡ ಪಾಟೀಲ್ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಸಿರಾಜ್ ಅವರ ಮನೆಯನ್ನು ಖಚಿತಪಡಿಸಿಕೊಂಡು ಮನೆಯ ಹಿಂಬದಿ ಸುತ್ತ ನೋಡಿದಾಗ ಮನೆಗೆ ಹೊಂದಿಕೊಂಡಂತೆ ಇದ್ದ ಶೆಡ್ ಒಳಭಾಗದಲ್ಲಿ ಬಿಳಿ ಬಣ್ಣದ ಫ್ರಿಡ್ಜ್ ಮೇಲೆ ತಲಾ 1 ಕೆಜಿ ತೂಕದಂತೆ ಕಟ್ಟು ಮಾಡಲಾಗಿದ್ದ 11 ಕೆಜಿ ದನದ ಮಾಂಸಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ದನದ ಮಾಂಸದ ಮೌಲ್ಯ 2,200/- ರೂಪಾಯಿ ಎಂದು ಅಂದಾಜಿಸಲಾಗಿದೆ. ಎಲ್ಲಿಯೋ ವಧೆ ಮಾಡಿದ ದನದ ಮಾಂಸವನ್ನು ಮಾರಾಟಕ್ಕಾಗಿ ಸಂಗ್ರಹಿಸಿಕೊಳ್ಳಲಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಗುಂಪಕಲ್ಲು : ದನದ ಮಾಂಸ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಮನೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ, 11 ಕೆಜಿ ಮಾಂಸ ವಶಕ್ಕೆ Rating: 5 Reviewed By: karavali Times
Scroll to Top