ಬೆಳ್ತಂಗಡಿ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದರ್ಶನ್ ಭೇಟಿ ಪರಿಶೀಲನೆ - Karavali Times ಬೆಳ್ತಂಗಡಿ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದರ್ಶನ್ ಭೇಟಿ ಪರಿಶೀಲನೆ - Karavali Times

728x90

3 August 2026

ಬೆಳ್ತಂಗಡಿ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದರ್ಶನ್ ಭೇಟಿ ಪರಿಶೀಲನೆ

ಬೆಳ್ತಂಗಡಿ, ಆಗಸ್ಟ್ 03, 2026 (ಕರಾವಳಿ ಟೈಮ್ಸ್) : ತೀವ್ರ ಮಳೆ ಹಿನ್ನೆಲೆಯಲ್ಲಿ ಬಾಧಿತವಾಗಿರುವ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಆಗಸ್ಟ್ 3 ರಂದು ಭೇಟಿ ನೀಡಿ ಮಳೆಯಿಂದಾದ ಅನಾಹುತಗಳನ್ನು ಪರಿಶೀಲಿಸಿದರು.

ನಿಡಿಗಲ್ ಸೇತುವೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸೇತುವೆ ಕ್ಷಮತೆ ಹಾಗೂ ನೀರು ಹರಿಯುವಿಕೆಯನ್ನು ಪರಿಶೀಲಿಸಿದರು. ಬಳಿಕ ಮುಂಡಾಜೆಗೆ ಭೇಟಿ ನೀಡಿ ಗುಡ್ಡ ಕುಸಿತ ಸ್ಥಳಗಳನ್ನು ವೀಕ್ಷಿಸಿದರು. ಪ್ರಾಕೃತಿಕ ದುರಂತಗಳನ್ನು ನಿರ್ವಹಿಸಲು ಪ್ರತೀ ಗ್ರಾಮಗಳಲ್ಲೂ ಅಗತ್ಯ ಸಿದ್ಧತೆಗಳನ್ನು ಮಾಡಿಡುವಂತೆ ಸೂಚಿಸಿದರು. 

ಈ ಸಂದರ್ಭ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್ ನರಗುಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದರ್ಶನ್ ಭೇಟಿ ಪರಿಶೀಲನೆ Rating: 5 Reviewed By: karavali Times
Scroll to Top