ಬೆಂಗಳೂರು, ಆಗಸ್ಟ್ 12, 2026 (ಕರಾವಳಿ ಟೈಮ್ಸ್) : ಸಿ ಎಂ ಡಿ.ಕೆ. ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಅಳೆದು ತೂಗಿ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ.
ಸಿಎಂ ಡಿ ಕೆ ಶಿವಕುಮಾರ್ ಬಳಿ ಹಣಕಾಸು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಿತ 8ಕ್ಕೂ ಹೆಚ್ಚು ಖಾತೆಗಳಿವೆ. ಆರೋಗ್ಯ ಸಚಿವ ಯು ಟಿ ಖಾದರ್ ಅವರಿಗೆ ಹೆಚ್ಚುವರಿಯಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಹಜ್ ಹಾಗೂ ವಕ್ಫ್ ಇಲಾಖೆಯ ಹೊಣೆ ವಹಿಸಲಾಗಿದೆ. ಉಳಿದಂತೆ ಝಮೀರ್ ಅಹ್ಮದ್ ಅವರಿಗೆ ವಸತಿ, ರಾಮಲಿಂಗಾ ರೆಡ್ಡಿ ಅವರಿಗೆ ಅರಣ್ಯ, ಭೂವಿಜ್ಞಾನ ಹಾಗೂ ಪರಿಸರ, ಲಕ್ಷ್ಮಣ ಸವದಿಗೆ ಸಹಕಾರ, ರುದ್ರಪ್ಪ ಲಮಾಣಿಗೆ ಸಕ್ಕರೆ, ಜವಳಿ, ಕೆ ಎಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ, ಶಿವರಾಜ್ ತಂಗಡಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಟಿ ರಘುಮೂರ್ತಿ ಅವರಿಗೆ ಎಸ್ ಟಿ ಕಲ್ಯಾಣ, ಅಜಯ್ ಸಿಂಗ್ ಅವರಿಗೆ ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ, ಎನ್ ಚೆಲುವರಾಯಸ್ವಾಮಿ ಅವರಿಗೆ ಜಲ ಸಂಪನ್ಮೂಲ, ಮಧು ಬಂಗಾರಪ್ಪಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಬಸವರಾಜ ರಾಯರೆಡ್ಡಿಗೆ ಉನ್ನತ ಶಿಕ್ಷಣ, ಶಿವಲಿಂಗೇಗೌಡಗೆ ಅಬಕಾರಿ, ಪುಟ್ಟರಂಗ ಶೆಟ್ಟಿಗೆ ಪಶು ಸಂಗೋಪನೆ, ವಿಜಯಾನಂದ ಕಾಶಪ್ಪನವರ್ ಅವರಿಗೆ ಸಣ್ಣ ಕೈಗಾರಿಕೆ,, ಸಾರ್ವಜನಿಕ ಉದ್ದಿಮೆ, ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಇಲಾಖೆ, ಕೆ ಎಸ್ ಬಸವಂತಪ್ಪಗೆ ಮುಜರಾಯಿ, ಮೀನುಗಾರಿಕೆ, ಒಳನಾಡು ಹಾಗೂ ಬಂದರು ಇಲಾಖೆ, ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ, ರಿಝ್ವಾನ್ ಅರ್ಶದ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನರೇಂದ್ರ ಸ್ವಾಮಿಗೆ ಕೃಷಿ, ಎಚ್ ಸಿ ಬಾಲಕೃಷ್ಣಗೆ ಪೌರಾಡಳಿತ, ಬಿ ನಾಗೇಂದ್ರ ಅವರಿಗೆ ಸಾಂಖ್ಯಿಕ ಇಲಾಖೆಯ ಹೊಣೆ ವಹಿಸಲಾಗಿದೆ.











0 comments:
Post a Comment