ಧರ್ಮಸ್ಥಳ, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ಮೊಬೈಲ್ ಟವರಿನ ಡೀಸೆಲ್ ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ನಡೆದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಇಂಡಸ್ ಮೊಬೈಲ್ ಟವರ್ ಸಂಸ್ಥೆಯ ಸೆಕ್ಯೂರಿಟಿ ಸೂಪರ್ ವೈಸರ್, ಮಂಗಳೂರು ಕಾವೂರು ನಿವಾಸಿ ದಿನೇಶ್ ಕೆ (53) ಅವರು ಪೊಲೀಸರಿಗೆ ದೂರು ನೀಡಿದ್ದು, ಬಂದಾರು ಗ್ರಾಮದಲ್ಲಿರುವ ಇಂಡಸ್ ಮೊಬೈಲ್ ಟವರಿನ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿರುವ ದಿಕ್ಷೀತ್ ಅವರು ಆಗಸ್ಟ್ 23 ರಂದು ರಾತ್ರಿ ವೇಳೆ ಟವರ್ ಪರಿಶೀಲನೆ ನಡೆಸುತ್ತಿದ್ದಾಗ, ಸಮೀಪದ ರಸ್ತೆಯ ಹತ್ತಿರ ನಿಲ್ಲಿಸಿದ್ದ ಕಾರಿಗೆ ಮೂವರು ವ್ಯಕ್ತಿಗಳು 2 ಕ್ಯಾನ್ ಗಳಲ್ಲಿ ಡೀಸಿಲ್ ತುಂಬಿಸುತ್ತಿರುವುದನ್ನು ಕಂಡು ಕಾರಿನ ಬಳಿಗೆ ಹೋದಾಗ, ಸದ್ರಿ ಮೂವರು ಕೆಎ20 ಡಿ 7442 ನೋಂದಣಿ ಸಂಖ್ಯೆಯ ಕಾರಿನಲ್ಲಿ ಡೀಸಿಲ್ ಕ್ಯಾನ್ ಸಮೇತ ಓಡಿ ಹೋಗಿರುತ್ತಾರೆ. ಓಡಿ ಹೋದವರ ಪೈಕಿ ಓರ್ವ ಈ ಹಿಂದೆ ಸದ್ರಿ ಟವರಿನಲ್ಲಿ ಟೆಕ್ನೀಶಿಯನ್ ಆಗಿದ್ದ ಧೀಕ್ಷಣ್ ಎಂಬುದಾಗಿದ್ದು, ಆತ ಹಾಗೂ ಇತರ ಇಬ್ಬರು ಸೇರಿ ಸುಮಾರು 6 ಸಾವಿರ ರೂಪಾಯಿ ಮೌಲ್ಯದ ಸುಮಾರು 60 ಲೀಟರ್ ಡೀಸಿಲ್ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಪ್ರಕರಣದ ಆರೋಪಿ ಧೀಕ್ಷಣ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.




















0 comments:
Post a Comment