ಪಾಣೆಮಂಗಳೂರಿನಲ್ಲಿ ಈದ್ ಮಿಲಾದ್ ಸಡಗರ-ಸಂಭ್ರಮ
ಬಂಟ್ವಾಳ, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ವ್ಯಾಪ್ತಿಯ ವಿವಿಧೆಡೆ ಈದ್ ಮಿಲಾದ್ ಅಚರಣೆ ಆಗಸ್ಟ್ 25 ರಂದು ಸಂಭ್ರಮ-ಸಡಗರದಿಂದ ನಡೆಯಿತು.
ನಾಡಿನ ಪ್ರಮುಖ ಬೀದಿಗಳಲ್ಲಿ ಸ್ವಲಾತ್ ಮೆರವಣಿಗೆ ಸಾಗಿ ಬಂತು. ಅಲ್ಲದೆ ಪ್ರತಿ ಮಸೀದಿ-ಮದ್ರಸಗಳಲ್ಲಿ ಮೌಲಿದ್ ಪಾರಾಯಣ, ಧಾರ್ಮಿಕ ಉಪನ್ಯಾಸ, ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿತು. ರ್ಯಾಲಿಯಲ್ಲಿ ಸಾಗಿ ಬಂದವರಿಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಹಿ ತಿಂಡಿ, ಅನ್ನ-ಪಾನೀಯಗಳನ್ನು ವಿತರಿಸಲಾಯಿತು.
ಪಾಣೆಮಂಗಳೂರು ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ತಹ್ಲೀಮುಲ್ ಇಸ್ಲಾಂ ಮದ್ರಸ ವತಿಯಿಂದ ಮಿಲಾದ್ ಪ್ರಯುಕ್ತ ಸ್ವಲಾತ್ ಮೆರವಣಿಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಿಂದ ಹೊರಟು ಬಂಗ್ಲೆಗುಡ್ಡೆವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಬೋಗೋಡಿ-ಗುಡ್ಡೆಅಂಗಡಿ ಮೂಲಕ ಮೆಲ್ಕಾರ್ ಮಾರ್ಗವಾಗಿ ವಾಪಾಸು ಮಸೀದಿ ಬಳಿ ಸಮಾಪ್ತಿಗೊಂಡಿತು. ಮಸೀದಿ ಅಧ್ಯಕ್ಷ ಅಬ್ದುಲ್ ರಹಮಾನ್ ಮೋನು ನೇತೃತ್ವ ವಹಿಸಿದ್ದರು. ಮಸೀದಿ ಮುದರ್ರಿಸ್ ಶೈಖುನಾ ಬಿ ಎಚ್ ಹಾಜಿ ಅಬೂಸ್ವಾಲಿಹ್ ಉಸ್ತಾದ್ ರ್ಯಾಲಿಗೆ ಚಾಲನೆ ನೀಡಿದರು.
ಮಿಲಾದ್ ಪ್ರಯುಕ್ತ ಸಂದೇಶ ನೀಡಿದ ಶೈಖುನಾ ಹಾಜಿ ಬಿ ಎಚ್ ಉಸ್ತಾದ್ ಮಾತನಾಡಿ, ಲೋಕಾನುಗ್ರಹಿ ಹಝ್ರತ್ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರ ಜನ್ಮದಿನದ ಪ್ರಯುಕ್ತ ವಿವಿಧ ಒಳಿತಿನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಪ್ರವಾದಿಗಳ ಸರಳ ಜೀವನ, ಅತ್ಯುತ್ತಮ ಸ್ವಭಾವವನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮುದಾಯದ ಮುಂದಿನ ಯುವ ಪೀಳಿಗೆಗೆ ನಾವೆಲ್ಲರೂ ಮಾದರಿಯಾಗಬೇಕಿದೆ ಎಂದು ಸಲಹೆ ನೀಡಿದರು.
ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ಬಳಿಯಿಂದ ಹೊರಟ ಸ್ವಲಾತ್ ಮೆರವಣಿಗೆ ಬಿ ಸಿ ರೋಡು ಮುಖ್ಯ ವೃತ್ತದ ಮೂಲಕ ಬಂಟ್ವಾಳ-ಕೆಳಗಿನಪೇಟೆವರೆಗೆ ಸಾಗಿ ವಾಪಾಸು ಗೂಡಿನಬಳಿಯಲ್ಲಿ ಸಮಾಪ್ತಿಗೊಂಡಿತು. ಬಂಟ್ವಾಳ ಜುಮಾ ಮಸೀದಿ ಹಾಗೂ ಮನಾರುಲ್ ಇಸ್ಲಾಂ ಮದ್ರಸ ವತಿಯಿಂದ ನಡೆದ ಸ್ವಲಾತ್ ಮೆರವಣಿಗೆ ಬಂಟ್ವಾಳ ಮಸೀದಿ ಬಳಿಯಿಂದ ಗೂಡಿನಬಳಿ ಮೂಲಕ ಬಿ ಸಿ ರೋಡು ಮುಖ್ಯವೃತ್ತದಿಂದ ವಾಪಾಸು ಬಂಟ್ವಾಳ-ಕೆಳಗಿನಪೇಟೆಯಲ್ಲಿ ಸಮಾಪ್ತಿಗೊಂಡಿತು.














































0 comments:
Post a Comment