ಮಾಣಿ : ಕರ್ನಾಟಕ ವಿದ್ಯಾ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಮಾಣಿ : ಕರ್ನಾಟಕ ವಿದ್ಯಾ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

15 August 2026

ಮಾಣಿ : ಕರ್ನಾಟಕ ವಿದ್ಯಾ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಮಾಣಿ ಕರ್ನಾಟಕ ಪ್ರೌಢ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಶಾಲಾಡಳಿತ ಮಂಡಳಿ ಅಧ್ಯಕ್ಷ ರೋ ಕಿರಣ್ ಹೆಗ್ಡೆ ಧ್ವಜಾರೋಹಣಗೈದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಜಮೀಲತ್ ನಿಶ್ಮಿಯ, ಜಾನ್ವಿ ಮತ್ತು ಆಸ್ಯ ಸಿಮ್ರಾ ಸ್ವಾತಂತ್ರ್ಯೋತ್ಸವ ಸಂದೇಶ ಭಾಷಣ ಮಾಡಿದರು.

ಶಾಲಾ ಸಂಚಾಲಕ ಹಾಜಿ ಇಬ್ರಾಹಿಂ ಕೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರುಗಳಾದ ಕೃತಿಕ ಮತ್ತು ಮೆಲ್ವಿನ್ ಕಿಶೋರ್ ಮಾರ್ಟಿಸ್, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ, ಹಿರಿಯ ಶಿಕ್ಷಕ ಎನ್. ಗಂಗಾಧರ ಗೌಡ ಭಾಗವಹಿಸಿದ್ದರು. 

ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಸ್ವಾಗತಿಸಿ, ಪ್ರಸ್ತಾವನೆಗೈದರು. ಹಿರಿಯ ಶಿಕ್ಷಕಿ ಶ್ಯಾಮಲಾ ಕೆ. ವಂದಿಸಿದರು. ಶಿಕ್ಷಕರಾದ ಜಯರಾಮ ಕಾಂಚನ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಮಹೇಶ್ ಶೆಟ್ಟಿ ಹಾಗೂ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಾಣಿ : ಕರ್ನಾಟಕ ವಿದ್ಯಾ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top