ಮಂಗಳೂರು, ಆಗಸ್ಟ್ 07, 2026 (ಕರಾವಳಿ ಟೈಮ್ಸ್) : ಅಶೋಕ್ ಲೇಲ್ಯಾಂಡ್ ಶೋರೂಮ್ ವತಿಯಿಂದ ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಖಾಲಿ ಇರುವ ಸೇಲ್ಸ್ ಎಕ್ಸಿಕ್ಯೂಟಿವ್ -10 (ಪುರುಷ), ವಾರಂಟಿ ಅಸಿಸ್ಟೆಂಟ್-2 (ಪುರುಷ), ಟೆಕ್ನಿಶಿಯನ್-8 (ಪುರುಷ), ಶೋರೂಮ್ ಹೋಸ್ಟೆಸ್-2 (ಮಹಿಳೆ) ಹುದ್ದೆಗೆ ನೇರ ಸಂದರ್ಶನವನ್ನು ಆಗಸ್ಟ್ 11 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಅಡ್ಯಾರ್ ಎನ್ ಎಚ್-75 ಓಲ್ಡ್ ಕಣ್ಣೂರು ಚೆಕ್ ಪೆÇೀಸ್ಟ್ ಹತ್ತಿರದ ಕಾಂಚನ ಅಟೋಮೋಟಿವ್ ಪ್ರೈವೇಟ್ ಲಿಮಿಟೆಡ್ ಇಲ್ಲಿ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಪಿ.ಯು.ಸಿ, ಡಿಪೆÇ್ಲೀಮಾ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment