ಎಲ್.ಪಿ.ಸಿ. ವಾರಂಟ್ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ - Karavali Times ಎಲ್.ಪಿ.ಸಿ. ವಾರಂಟ್ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ - Karavali Times

728x90

30 August 2026

ಎಲ್.ಪಿ.ಸಿ. ವಾರಂಟ್ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ

 ಮಂಗಳೂರು, ಆಗಸ್ಟ್ 31, 2026 (ಕರಾವಳಿ ಟೈಮ್ಸ್) : ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 135/2013 ಕಲಂ 392 ಐಪಿಸಿ ಪ್ರಕರಣದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಮಂಜೇಶ್ವರ ಗ್ರಾಮದ, ಉಪ್ಪಳ-ಪೈವಳಿಕೆ ಟೆಂಪಲ್ ಸಮೀಪದ ನಿವಾಸಿ ಸೈಯದ್ ಮುಕ್ಬಾಲ್ ನಿವಾಸಿ ಮಹಮ್ಮದ್ ತೌಸೀಫ್ (40) ಎಂದು ಹೆಸರಿಸಲಾಗಿದೆ.

 ಈತನು ಸದರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ ಕಾರಣ 2ನೇ ಸಿಜೆಎಂ ನ್ಯಾಯಾಲಯ ಸದರಿ ಪ್ರಕರಣವನ್ನು ಎಲ್ ಪಿ ಸಿ ಸಂಖ್ಯೆ 3/2026 ರಂತೆ ಆದೇಶಿಸಿತ್ತು. ಆರೋಪಿಯನ್ನು ಆಗಸ್ಟ್ 29 ರಂದು ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಪರಂಗಿಪೇಟೆಯಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ಸೆ 13 ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈತ ಕುಖ್ಯಾತ ಸರಗಳ್ಳತನದ ಆರೋಪಿ ಸೈಯದ್ ಸಾಹೀಲ್ ಎಂಬಾತನ ಅಣ್ಣನಾಗಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಎಲ್.ಪಿ.ಸಿ. ವಾರಂಟ್ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ Rating: 5 Reviewed By: lk
Scroll to Top