ಆಗಸ್ಟ್ 5 ರಂದು ಸಚಿವ ಯು.ಟಿ. ಖಾದರ್ ಜಿಲ್ಲಾ ಪ್ರವಾಸ : ಬೆಳ್ತಂಗಡಿ, ಬಂಟ್ವಾಳದ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಸಭೆ - Karavali Times ಆಗಸ್ಟ್ 5 ರಂದು ಸಚಿವ ಯು.ಟಿ. ಖಾದರ್ ಜಿಲ್ಲಾ ಪ್ರವಾಸ : ಬೆಳ್ತಂಗಡಿ, ಬಂಟ್ವಾಳದ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಸಭೆ - Karavali Times

728x90

4 August 2026

ಆಗಸ್ಟ್ 5 ರಂದು ಸಚಿವ ಯು.ಟಿ. ಖಾದರ್ ಜಿಲ್ಲಾ ಪ್ರವಾಸ : ಬೆಳ್ತಂಗಡಿ, ಬಂಟ್ವಾಳದ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಸಭೆ

ಮಂಗಳೂರು, ಆಗಸ್ಟ್ 04, 2026 (ಕರಾವಳಿ ಟೈಮ್ಸ್) : ಆರೋಗ್ಯ ಸಚಿವ ಯು ಟಿ ಖಾದರ್ ಅವರು ಆಗಸ್ಟ್ 5 ರಂದು ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 8.15ಕ್ಕೆ ಮಂಗಳೂರು ವಿಮಾನ ನಿಲ್ದಾಣ ಆಗಮಿಸುವ ಸಚಿವರು, 10 ಗಂಟೆಗೆ ಬೆಳ್ತಂಗಡಿ ರೆಖ್ಯಾದಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರ ಮನೆಗೆ ಭೇಟಿ, ಬಳಿಕ ತಾಲೂಕಿನ ವಿವಿಧೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವರು. 12 ಗಂಟೆಗೆ ಬೆಳ್ತಂಗಡಿ ತಾ.ಪಂ.ನಲ್ಲಿ ಸಭೆ, ಮಧ್ಯಾಹ್ನ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಅಪರಾಹ್ನ 2 ಗಂಟೆಗೆ ಬಂಟ್ವಾಳ ತಾ.ಪಂ.ನಲ್ಲಿ ಸಚಿವರು ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಆಗಸ್ಟ್ 5 ರಂದು ಸಚಿವ ಯು.ಟಿ. ಖಾದರ್ ಜಿಲ್ಲಾ ಪ್ರವಾಸ : ಬೆಳ್ತಂಗಡಿ, ಬಂಟ್ವಾಳದ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಸಭೆ Rating: 5 Reviewed By: karavali Times
Scroll to Top