ಕಡಬ : ಕುಂಡಡ್ಕ ಫಾಲ್ಸ್ ಗೆ ಆಟವಾಡಲು ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ : ಪ್ರಕರಣ ದಾಖಲು - Karavali Times ಕಡಬ : ಕುಂಡಡ್ಕ ಫಾಲ್ಸ್ ಗೆ ಆಟವಾಡಲು ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ : ಪ್ರಕರಣ ದಾಖಲು - Karavali Times

728x90

11 August 2026

ಕಡಬ : ಕುಂಡಡ್ಕ ಫಾಲ್ಸ್ ಗೆ ಆಟವಾಡಲು ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ : ಪ್ರಕರಣ ದಾಖಲು

 ಕಡಬ, ಆಗಸ್ಟ್ 11, 2026 (ಕರಾವಳಿ ಟೈಮ್ಸ್) : ಕಡಬ ಕುಂಡಡ್ಕ ಫಾಲ್ಸ್ ಗೆ ಆಟವಾಡಲು ತೆರಳಿದ್ದ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿಗಳಿಗೆ ತಂಡವೊಂದು ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಪ್ರಾಯದ ಬಾಲಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈತ ತನ್ನ ನಾಲ್ವರು ಸಹಪಾಠಿಗಳೊಂದಿಗೆ ಆಗಸ್ಟ್ 3 ರಂದು ಬೆಳಿಗ್ಗೆ ಕಡಬ ಕುಂಡಡ್ಕ ಪಾಲ್ಸ್ ಗೆ ತೆರಳಿ ಆಟವಾಡುತ್ತಿದ್ದಾಗ, ಆರೋಪಿಗಳಾದ ರೋಹಿತ್, ದೇವಿಪ್ರಸಾದ್‌, ಚಂದನ್‌, ಉಮೇಶ ಹಾಗೂ ಸದ್ರಿ ವಿದ್ಯಾರ್ಥಿಗಳೊಂದಿಗೆ ಇದ್ದ ವಿಧ್ಯಾರ್ಥಿನಿಯ ತಂದೆ ಸ್ಥಳಕ್ಕೆ ಬಂದಿರುತ್ತಾರೆ. ಆರೋಪಿಗಳು ಜೊತೆ ಸೇರಿ ದೂರುದಾರ ಬಾಲಕನಿಗೆ ಅವ್ಯಾಚವಾಗಿ ಬೈದು, ಆತನಿಗೆ ಹಾಗೂ ಇಬ್ಬರು ಸಹಪಾಠಿ ಬಾಲಕರಿಗೆ ಹಲ್ಲೆ ನಡೆಸಿರುವುದಲ್ಲದೇ ಜೀವಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಆಗಸ್ಟ್ 11 ರಂದು ನೀಡಿದ ದೂರಿನಂತೆ ಕಡಬ ಪೊಲೀಸ್‌‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/2026 ಕಲಂ 189(2),190, 351(3), 352, 115(2), ಬಿ ಎನ್ ಎಸ್ - 2023, ಕಲಂ 3(1)(ಆರ್), 3(1)(ಎಸ್),3(2) (ವಿಎ) The SC & ST (Prevention of Atrocities) Amendment Act 2015 ರಂತೆ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಕುಂಡಡ್ಕ ಫಾಲ್ಸ್ ಗೆ ಆಟವಾಡಲು ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ತಂಡದಿಂದ ಹಲ್ಲೆ : ಪ್ರಕರಣ ದಾಖಲು Rating: 5 Reviewed By: lk
Scroll to Top