ಉಪ್ಪಿನಂಗಡಿ, ಆಗಸ್ಟ್ 16, 2026 (ಕರಾವಳಿ ಟೈಮ್ಸ್) : ಯುವತಿಯೊಬ್ಬಳನ್ನು ಮನೆಗೆ ಬಿಟ್ಟು ಬರುತ್ತಿದ್ದವರ ಕಾರನ್ನು ದಾರಿಯಲ್ಲಿ ತಡೆದ ತಂಡವೊಂದು ನೈತಿಕ ಗೂಂಡಾಗಿರಿ ನಡೆಸಿದ ಘಟನೆ ನೆಲ್ಯಾಡಿ ಸಮೀಪದ ಕೋಲ್ಪೆ ಎಂಬಲ್ಲಿ ಆಗಸ್ಟ್ 12 ರಂದು ರಾತ್ರಿ ಸಂಭವಿಸಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಿವಾಸಿ ಯುವತಿ ಫಾಯಿಝಾ (18) ಎಂಬಾಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ಆಗಸ್ಟ್ 12 ರಂದು ಕೆಲಸ ಮುಗಿಸಿ ರಾತ್ರಿ ಕಾರಿನಲ್ಲಿ ತನ್ನ ಪರಿಚಯದ ಸಿಪ್ನಾನ್, ಝಾಹಿರ್ ಹಾಗೂ ಸಫಿಯಾ ಎಂಬವರೊಂದಿಗೆ ಮನೆಗೆ ಬಂದಿದ್ದು, ಫಾಯಿಝಾ ಅವರನ್ನು ಮನೆಗೆ ಬಿಟ್ಟು ಉಳಿದ ಮೂವರು ಹಿಂತಿರುಗಿ ಕಡಬ ಕೊಣಾಲು ಕೋಲ್ಪೆ ಎಂಬಲ್ಲಿಗೆ ತಲುಪಿದಾಗ ಆರೋಪಿಗಳಾದ ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್, ಅಶ್ರಫ್ ಕೋಲ್ಪೆ ಎಂಬವರುಗಳ ತಂಡ ಅವರನ್ನು ದಾರಿಯಲ್ಲಿ ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಸಂದರ್ಭ ಸ್ಥಳಕ್ಕೆ ಬಂದ ಫಾಯಿಝಾ, ಜಮಾಲ್ ಹಾಗೂ ಫಾಯಿಝಾ ಅವರ ತಂಗಿಗೂ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಪರಾಧ ಕ್ರಮಾಂಕ 107/2026, ಕಲಂ: 189(2), 191(2), 126(2) 352, 115(2) , 351(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
15 August 2026
- Blogger Comments
- Facebook Comments
Subscribe to:
Post Comments (Atom)





















0 comments:
Post a Comment