ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ ವಿರುದ್ದ ಕೇಸು ದಾಖಲು - Karavali Times ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ ವಿರುದ್ದ ಕೇಸು ದಾಖಲು - Karavali Times

728x90

19 August 2026

ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ ವಿರುದ್ದ ಕೇಸು ದಾಖಲು

ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ವಿರುದ್ದ ಆಸ್ಪತ್ರೆಯ ಸೂಚನಾ ಪತ್ರದ ಮೇರೆಗೆ ಆತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆರೋಪಿಯನ್ನು ಸೆಯ್ಯದ್ ಇಮ್ರಾನ್ ಎಂದು ಹೆಸರಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಎಚ್ ಸಿ ಅಬ್ದುಲ್ ಲತೀಫ್ ಅವರು ಕರ್ತವ್ಯದಲ್ಲಿದ್ದ ಸಂದರ್ಭ ಬಂಟ್ವಾಳ ಸರಕಾರಿ ಆಸ್ಪತ್ರೆಯಿಂದ ಬಂಧ ಸೂಚನಾ ಪತ್ರದ ಮೇರೆಗೆ ಹೇಳಿಕೆ ಪಡೆಯಲು ಆಸ್ಪತ್ರೆಗೆ ಹೋದಾಗ ಚಿಕಿತ್ಸೆಯಲ್ಲಿದ್ದ ಆರೋಪಿ ಸೆಯ್ಯದ್ ಇಮ್ರಾನ್ ಎಂಬಾತನನ್ನು ವಿಚಾರಿಸಿದಾಗ ಆತ ಮೂರು ದಿನಗಳಿಂದ ಎಂಡಿಎಂಎ ಅಮಲು ಪದಾರ್ಥ ಸೇವಿಸಿದ್ದು, ಆಗಸ್ಟ್ 15 ರಂದು ಸಂಜೆ 5.30ರ ವೇಳೆಗೆ ಬಿ ಸಿ ರೋಡು ಬಸ್ ನಿಲ್ದಾಣದ ಬಳಿ ಬಸ್ಸಿನಿಂದ ಇಳಿದು ತಾನು ತಂದಿದ್ದ ಎಂಡಿಎಂಎ ಮಾದಕ ವಸ್ತು ಸೇವಿಸಿದಾಗ ಹೊಟ್ಟೆ ನೋವು ಕಾಣಿಸಿಕೊಂಡಿರುವುದಾಗಿಯೂ ಮಾದಕ ವಸ್ತು ಆತನ ಸ್ನೇಹಿತ ಹಾಸನದ ಜರ್ತಾಬ್ ಎಂಬಾತ ನೀಡಿರುವುದಾಗಿ ತಿಳಿಸಿದ್ದಾನೆ. 

ಈತನನ್ನು ಮಾದಕ ವಸ್ತು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾದಕ ವಸ್ತು ಸೇವಿಸಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ ವಿರುದ್ದ ಕೇಸು ದಾಖಲು Rating: 5 Reviewed By: karavali Times
Scroll to Top