ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ಕೆನರಾ ಫೆÇೀಟೋಗ್ರಾಫರ್ಸ್ ಎಸೋಸಿಯೇಷನ್ ರಿ. ದ.ಕ. ಉಡುಪಿ ಜಿಲ್ಲೆ. ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಗ್ರಹಣ ದಿನಾಚರಣೆಯನ್ನು ವಿಟ್ಲದ ಐಬಿ (ನಿರೀಕ್ಷಣಾ ಮಂದಿರ) ದಲ್ಲಿ ನಡೆಯಿತು.
ಇದೇ ವೇಳೆ ವಲಯದ ಹಿರಿಯ ಛಾಯಾಗ್ರಾಹಕ ಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು. ಈ ಸಂಧರ್ಭ ವಲಯದ ಅಧ್ಯಕ್ಷ ರಾಜೇಂದ್ರ ಕೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಕಟ್ಟದ ಸಮಿತಿ ಅಧ್ಯಕ್ಷ ಆನಂದ್ ಯಾನ್, ಗೌರವಧ್ಯಕ್ಷ ಕಿಶೋರ್, ಪ್ರಧಾನ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ವಲಯದ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ದಯಾನಂದ್ ಬಂಟ್ವಾಳ ಸ್ವಾಗತಿಸಿ, ರಂಜು ಧಾಮ ವಂದಿಸಿದರು.











0 comments:
Post a Comment