ಬಂಟ್ವಾಳ, ಆಗಸ್ಟ್ 01, 2026 (ಕರಾವಳಿ ಟೈಮ್ಸ್) : ಮಂಗಳೂರು-ಉಪ್ಪಿನಂಗಡಿ ನಡುವೆ ಸಂಚಾರದ ಖಾಸಗಿ ಬಸ್ಸಿನಲ್ಲಿ ವೃದ್ದ ಪ್ರಯಾಣಿಕರೋರ್ವರು ಖಾಸಗಿ ಅಂಗ ಪ್ರದರ್ಶಿಸಿದ ಘಟನೆ ಜುಲೈ 30 ರಂದು ನಡೆದಿದ್ದು, ಈ ಬಗ್ಗೆ ಬಸ್ಸು ಚಾಲಕ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜುಲೈ 30 ರಂದು ಮದ್ಯಾಹ್ನ ಸ್ಟೇಟ್ ಬ್ಯಾಂಕಿನಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಉಪ್ಪಿನಂಗಡಿಗೆ ಹೊರಟಿದ್ದು, ಮದ್ಯಾಹ್ನ 2.10 ರ ವೇಳೆಗೆ ಬಿ ಸಿ ರೋಡು ಬಸ್ಸು ನಿಲ್ದಾಣಕ್ಕೆ ತಲುಪಿದಾಗ ಬಿ ಸಿ ರೋಡಿನಲ್ಲಿ ಓರ್ವ 60-70 ವರ್ಷದ ಪ್ರಾಯದ ವ್ಯಕ್ತಿಯು ಬಸ್ಸು ಹತ್ತಿ ಚಾಲಕನ ಎಡ ಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದರು. ಮೆಲ್ಕಾರ್ ಜಂಕ್ಷನ್ನಿನಲ್ಲಿ ಇಳಿದು ಹೋಗಿರುತ್ತಾರೆ. ಸದ್ರಿ ಅಪರಿಚಿತ ವೃದ್ದ ವ್ಯಕ್ತಿಯು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಖಾಸಗಿ ಅಂಗವನ್ನು ಉಳಿದ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸಿದ್ದು, ಈ ಘಟನೆಯನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಮೂಲಕ ಸೆರೆ ಹಿಡಿದಿರುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಬಸ್ಸಿನ ಚಾಲಕ ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2026 ಕಲಂ 75(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.











0 comments:
Post a Comment