ಪುತ್ತೂರು, ಆಗಸ್ಟ್ 30, 2026 (ಕರಾವಳಿ ಟೈಮ್ಸ್) : ಆಗಸ್ಟ್ 31 ರಂದು ನಡೆಯಲಿರುವ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಷರತ್ತುಬದ್ದ ಅನುಮತಿ ನೀಡಲಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 30 ರಂದು ಭಾನುವಾರ ಪೆÇಲೀಸರು ಪಥ ಸಂಚಲನ ನಡೆಸಿ ಭದ್ರತೆಯ ಬಗ್ಗೆ ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.
ಕಾರ್ಯಕ್ರಮ ಹಿನ್ನಲೆಯಲ್ಲಿ ಪುತ್ತೂರು ನಗರದಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಓರ್ವ ಎಡಿಶನಲ್ ಎಸ್ಪಿ, ಒಬ್ಬರು ಡಿವೈಎಸ್ಪಿ, ಮೂವರು ಇನ್ಸ್ ಪೆಕ್ಟರುಗಳು, 10 ಮಂದಿ ಪಿಎಸ್ಸೈಗಳು, 14 ಮಂದಿ ಎಎಸ್ಸೈಗಳ, 139 ಮಂದಿ ಸಿಬ್ಬಂದಿಗಳ ಸಹಿತ, 5 ಕೆ.ಎಸ್.ಆರ್.ಪಿ ತುಕಡಿ, 2 ಎಸ್.ಎ.ಎಫ್ ತಂಡ ಹಾಗೂ 7 ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

























0 comments:
Post a Comment