ಬಂಟ್ವಾಳದಲ್ಲಿ ಭಾರೀ ಮಳೆ : ಮೊಗರ್ನಾಡು ಹಾಗೂ ವಿಟ್ಲ ಕಸಬಾದಲ್ಲಿ ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಭಾರೀ ಮಳೆ : ಮೊಗರ್ನಾಡು ಹಾಗೂ ವಿಟ್ಲ ಕಸಬಾದಲ್ಲಿ ಮನೆಗಳಿಗೆ ಹಾನಿ - Karavali Times

728x90

1 August 2026

ಬಂಟ್ವಾಳದಲ್ಲಿ ಭಾರೀ ಮಳೆ : ಮೊಗರ್ನಾಡು ಹಾಗೂ ವಿಟ್ಲ ಕಸಬಾದಲ್ಲಿ ಮನೆಗಳಿಗೆ ಹಾನಿ

ಬಂಟ್ವಾಳ, ಆಗಸ್ಟ್ 01, 2026 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಬಿರುಸು ಪಡೆದುಕೊಂಡಿದ್ದು, ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ನರಿಕೊಂಬು ಗ್ರಾಮದ ಮೊಗರ್ನಾಡು ನಿವಾಸಿ ಪ್ರಶಾಂತ್ ಬಿನ್ ವಾಸು ಸಪಲ್ಯ ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದ ಗಮಿ ನಿವಾಸಿ ಬಾಲಕೃಷ್ಣ ಗೌಡ ಬಿನ್ ವಾಸಪ್ಪ ಗೌಡ ಅವರ ದನದ ಹಟ್ಟಿ ಸಂಪೂರ್ಣ ಕುಸಿದು ಬಿದ್ದಿರುತ್ತದೆ. ಜಾನುವಾರುಗಳಿಗೆ ಯಾವುದೇ ಹಾನಿಯಾಗಿರುವುದಿಲ್ಲ. ವಾಸ್ತವ್ಯದ ಮನೆಗೂ ಹಾನಿಯಾಗಿರುವುದಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಭಾರೀ ಮಳೆ : ಮೊಗರ್ನಾಡು ಹಾಗೂ ವಿಟ್ಲ ಕಸಬಾದಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top