ಮಂಗಳೂರು, ಆಗಸ್ಟ್ 11, 2026 (ಕರಾವಳಿ ಟೈಮ್ಸ್) : ತೊಕ್ಕೊಟ್ಟು ವಿನಮ್ರ ಬಾರ್ ಬಳಿ ಆಗಸ್ಟ್ 9 ರಂದು ಮಧ್ಯ ರಾತ್ರಿ ತಲವಾರು ಹಿಡಿದು ಬೆದರಿಕೆ ಹಾಕಿದ ರೌಡಿ ಶೀಟರ್ ಶಾಕೀರ್ ಹಾಗೂ ಅಸ್ಪಕ್ ಎಂಬವರ ವಿರುದ್ದ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪೊಲೀಸ್ ಸಿಬ್ಬಂದಿ ಮಂಜುನಾಥ್ ಹಡಪದ ಅವರು ದೂರು ನೀಡಿದ್ದು, ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಗೆ ಠಾಣೆಯಲ್ಲಿ ತನ್ನ ಮೊಬೈಲಿನಲ್ಲಿ ವಾಟ್ಸಪ್ ಪರಿಶೀಲಿಸುತ್ತಿರುವ ವೇಳೆ ತೊಕ್ಕೊಟ್ಟು ವಿನಮ್ರ ಬಾರ್ ಬಳಿ ರೌಡಿ ಶೀಟರ್ ಶಾಕೀರ್ ತಲವಾರು ಹಿಡಿದು ದಾಂಧಲೆ ನಡೆಸಿದ ಬಗ್ಗೆ ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿದಾಗ, ಆಗಸ್ಟ್ 9 ರಂದು ರಾತ್ರಿ ಸುಮಾರು 12.30ಕ್ಕೆ ಆಟೋ ರಿಕ್ಷಾದಲ್ಲಿ ಶಾಕೀರ್ ಹಾಗೂ ಅಸ್ಪಕ್ ಎಂಬವರು ತೊಕ್ಕೊಟ್ಟು ವಿನಮ್ರ ಬಾರ್ ಬಳಿ ಬಂದು, ಶಾಕೀರ್ ಕೈಯಲ್ಲಿ ಉದ್ದದ ತಲವಾರ್ ಹಿಡಿದುಕೊಂಡು ಬಾರ್ ಬಳಿಯಿದ್ದ ಸಾರ್ವಜನಿಕರಿಗೆ ತಲವಾರನ್ನು ತೋರಿಸುತ್ತಾ ಸಾರ್ವಜನಿಕರನ್ನು ಉದ್ದೇಶಿಸಿ “ಲೌಡೆ ಬಾಗ್, ಬಾಗ್” ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಬಾರ್ ಎದುರು ಹೋಗಿ ಬಾರ್ ಸಿಬ್ಬಂದಿಗೆ ತಲವಾರು ತೋರಿಸಿ ತುಳು ಭಾಷೆಯಲ್ಲಿ “ದಾನೆಂಬೆ ರಂಡೆ ಮಗ, ತಲವಾರುಡು ಪಾಡುವೆ, ಬಂದ್ ಮಲ್ಪುಲೆ ದಾನೆ ರಂಡೆ ಮಗಾ, ನಾಯಿದ ಮಗ, ಬಲ ಪಿದೈ ದೆಪ್ಪುವೆ” (ಏನು ರಂಡೆಮಗಾ, ತಲವಾರಿನಲ್ಲಿ ಹಾಕುತ್ತೇನೆ, ಬಂದ್ ಮಾಡು ರಂಡೆ ಮಗಾ, ನಾಯಿ ಮಗ, ಹೊರಗೆ ಬಾ ತೆಗೆಯುತ್ತೇನೆ) ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಬಾರ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಯ ಹುಟ್ಟಿಸಿರುವುದಾಗಿದೆ. ಆರೋಪಿ ಶಾಕೀರ್ ಎಂಬಾತನ ಮೇಲೆ ಉಳ್ಳಾಲ ಪೆÇಲೀಸ್ ಠಾಣೆ ಹಾಗೂ ಇತರ ಪೆÇಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿರುತ್ತದೆ. ಈ ಬಗ್ಗೆ ಶಾಕೀರ್ ಹಾಗೂ ಅಸ್ಪಕ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment