ತುಂಬೆ ಬಿ.ಎ. ವಿದ್ಯಾ ಸಂಸ್ಥೆಯಲ್ಲಿ ಕ್ರೀಡಾ ಸಂಘ ಉದ್ಘಾಟನೆ - Karavali Times ತುಂಬೆ ಬಿ.ಎ. ವಿದ್ಯಾ ಸಂಸ್ಥೆಯಲ್ಲಿ ಕ್ರೀಡಾ ಸಂಘ ಉದ್ಘಾಟನೆ - Karavali Times

728x90

24 August 2026

ತುಂಬೆ ಬಿ.ಎ. ವಿದ್ಯಾ ಸಂಸ್ಥೆಯಲ್ಲಿ ಕ್ರೀಡಾ ಸಂಘ ಉದ್ಘಾಟನೆ

ಬಂಟ್ವಾಳ, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಕ್ರೀಡಾ ಸಂಘ ಉದ್ಘಾಟನೆಗೊಂಡಿತು. 

ಈ ಸಂದರ್ಭ ಮಾತನಾಡಿದ ಕಾಲೇಜು ಉಪನ್ಯಾಸಕಿ ಶ್ರೀಮತಿ ಕವಿತಾ ಕೆ ಅವರು, ವಿದ್ಯಾರ್ಥಿ ಜೀವನ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಪುಸ್ತಕ ಓದುವುದಲ್ಲ. ಅದು ವ್ಯಕ್ತಿತ್ವದ ಸಮಗ್ರ ವಿಕಾಸದ ಸಮಯ. ಶಿಕ್ಷಣ ನಮಗೆ ಜ್ಞಾನವನ್ನು ನೀಡಿದರೆ ಕ್ರೀಡೆ ನಮಗೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ಕ್ರೀಡಾಂಗಣದಲ್ಲಿ ಸಿಗುವ ಅನುಭವಗಳು ತರಗತಿಯಲ್ಲಿ ಸಿಗುವುದಿಲ್ಲ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಈ ವಿದ್ಯಾ ಸಂಸ್ಥೆಯ ಕ್ರೀಡಾ ಸಂಘವು ನಿಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರತರಲು ಒಂದು ಉತ್ತಮ ವೇದಿಕೆಯಾಗಲಿ. ಈ ವಿದ್ಯಾ ಸಂಸ್ಥೆಯಿಂದ ಉತ್ತಮ ಕ್ರೀಡಾಪಟುಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ. ಆಟದಲ್ಲಿ ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಸೋತರೆ ನಿರಾಸೆ ಬೇಡ. ಅದು ಮುಂದಿನ ಗೆಲುವಿನ ಮೆಟ್ಟಿಲು ಎಂದರು. 

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ರೈ ಬಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಮತಿ ಮೋಲಿ ಎಡ್ನಾ ಗೊನ್ಸಾಲ್ವಿಸ್ ವಂದಿಸಿದರು. ಸಾಯಿರಾಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ಬಿ.ಎ. ವಿದ್ಯಾ ಸಂಸ್ಥೆಯಲ್ಲಿ ಕ್ರೀಡಾ ಸಂಘ ಉದ್ಘಾಟನೆ Rating: 5 Reviewed By: karavali Times
Scroll to Top