ಪುತ್ತೂರಿನಲ್ಲಿ ಪೊಲೀಸ್ ಪಥ ಸಂಚಲನ : ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಬಂದೋಬಸ್ತಿಗೆ ಹೆಚ್ಚುವರಿ ತುಕಡಿಗಳ ನೇಮಕ - Karavali Times ಪುತ್ತೂರಿನಲ್ಲಿ ಪೊಲೀಸ್ ಪಥ ಸಂಚಲನ : ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಬಂದೋಬಸ್ತಿಗೆ ಹೆಚ್ಚುವರಿ ತುಕಡಿಗಳ ನೇಮಕ - Karavali Times

728x90

24 August 2026

ಪುತ್ತೂರಿನಲ್ಲಿ ಪೊಲೀಸ್ ಪಥ ಸಂಚಲನ : ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಬಂದೋಬಸ್ತಿಗೆ ಹೆಚ್ಚುವರಿ ತುಕಡಿಗಳ ನೇಮಕ

ಪುತ್ತೂರು, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹಾಗೂ ಭದ್ರತಾ ಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಗಸ್ಟ್ 24 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪೆÇಲೀಸ್ ಪಥಸಂಚಲನ ನಡೆಸಲಾಗಿದೆ. 

ಸ್ವಾಭಾವಿಕವಾಗಿ ಈದ್ ಮಿಲಾದ್ ಹಬ್ಬದ ದಿನ, ಹಬ್ಬದ ಪ್ರಯುಕ್ತ ಬಹುತೇಕ ಅಂಗಡಿಗಳು ಮುಚ್ಚಿರುತ್ತದೆ. ಇದರ ಹೊರತಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡುವುದಕ್ಕೆ ಆಸ್ಪದ ನೀಡದಂತೆ ಅಗತ್ಯ ಪೆÇಲೀಸ್ ಭದ್ರತೆ ಏರ್ಪಡಿಸಿಲಾಗಿದೆ.

ಪುತ್ತೂರಿನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪೆÇಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಂಬಂಧಪಟ್ಟವರಿಗೆ ನೊಟೀಸ್ ಜಾರಿ ಮಾಡಿರುತ್ತಾರೆ. ಆದರೆ ಪೆÇಲೀಸರು ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂಬುದಾಗಿ ವದಂತಿಗಳನ್ನು ಹರಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು, ಈ ಹಿಂದಿನ ಹಲವು ಪ್ರಕರಣಗಳಲ್ಲಿ ಜಾತಿ, ಧರ್ಮ, ರಾಜಕೀಯ ಪ್ರಭಾವಗಳನ್ನು ಪರಿಗಣಿಸದೇ ಪೆÇಲೀಸರು ನೋಟಿಸ್ ನೀಡಿದ್ದು, ಈ ಬಗ್ಗೆ ಯಾರಾದರೂ ಚರ್ಚಿಸಲು ಬಯಸಿದಲ್ಲಿ ಬಂದು ಮುಕ್ತವಾಗಿ ಚರ್ಚಿಸಬಹುದಾಗಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಸ್ಪಷ್ಟಪಡಿಸಿದ್ದಾರೆ. 

ಈದ್ ಮಿಲಾದ್ ಪ್ರಯುಕ್ತ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ಮುನ್ನಚ್ಚರಿಕೆ ವಹಿಸಲಾಗಿದೆ. ಪುತ್ತೂರು ವ್ಯಾಪ್ತಿಯಲ್ಲಿ ಓರ್ವ ಎಡಿಶನಲ್ ಎಸ್ಪಿ, ಓರ್ವ ಡಿವೈಎಸ್ಪಿ, 8 ಮಂದಿ ಪಿಎಸ್ಸೈಗಳು, 10 ಮಂದಿ ಎಎಸೈಗಳು ಹಾಗೂ 50 ಮಂದಿ ಸಿಬ್ಬಂದಿಗಳನ್ನು, 5 ಕೆ.ಎಸ್.ಆರ್.ಪಿ. ತುಕಡಿಗಳು, 3 ಡಿ.ಎ.ಆರ್. ತುಕಡಿಗಳನ್ನು ಹಾಗೂ 1 ಎಸ್.ಎಫ್ ತುಕಡಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರಿನಲ್ಲಿ ಪೊಲೀಸ್ ಪಥ ಸಂಚಲನ : ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಬಂದೋಬಸ್ತಿಗೆ ಹೆಚ್ಚುವರಿ ತುಕಡಿಗಳ ನೇಮಕ Rating: 5 Reviewed By: karavali Times
Scroll to Top