ಶಿರ್ಲಾಲು : ಅಂಬಡೆ ಮರದಿಂದ ಕೆರೆ ಬಿದ್ದು ಗಂಭೀರಾವಸ್ಥೆ ತಲುಪಿದ್ದ ವ್ಯಕ್ತಿ ಮೃತ್ಯು - Karavali Times ಶಿರ್ಲಾಲು : ಅಂಬಡೆ ಮರದಿಂದ ಕೆರೆ ಬಿದ್ದು ಗಂಭೀರಾವಸ್ಥೆ ತಲುಪಿದ್ದ ವ್ಯಕ್ತಿ ಮೃತ್ಯು - Karavali Times

728x90

29 August 2026

ಶಿರ್ಲಾಲು : ಅಂಬಡೆ ಮರದಿಂದ ಕೆರೆ ಬಿದ್ದು ಗಂಭೀರಾವಸ್ಥೆ ತಲುಪಿದ್ದ ವ್ಯಕ್ತಿ ಮೃತ್ಯು

ಬಂಟ್ವಾಳ, ಆಗಸ್ಟ್ 29, 2026 (ಕರಾವಳಿ ಟೈಮ್ಸ್) : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಕೊಡೆಂಗೆಬೈಲು ನಿವಾಸಿ ಕೃಷ್ಣಪ್ಪ ಅವರು ಅಂಬಡೆ ಮರಕ್ಕೆ ಹತ್ತಿ ಅಂಬಟೆ ಕಾಯಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ಚಿಕಿತ್ಸೆ ಫಲಿಸದೆ ಆಗಸ್ಟ್ 27 ರಂದು ಮೃತಪಟ್ಟಿದ್ದಾರೆ. 

ಈ ಬಗ್ಗೆ ಮೃತರ ಸಹೋದರ ಕಿಶೋರ್ (22) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಅಣ್ಣ ಕೃಷ್ಣಪ್ಪ ಆ 25 ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮ ಕೊಡಂಗೆಬೈಲು ಎಂಬಲ್ಲಿ ಮನೆಯ ಹತ್ತಿರದಲ್ಲಿರುವ ಕೆರೆಯ ಬಳಿ ಇರುವ ಅಂಬಡೆ ಮರಕ್ಕೆ ಹತ್ತಿ ಅಂಬಟೆ ಕಾಯಿ ತೆಗೆಯುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲೇ ಹತ್ತಿರದಲ್ಲಿದ್ದ ತಾಯಿ ಮತ್ತು ತಂಗಿ ಹಾಗೂ ತಮ್ಮ ಲಿಂಗಪ್ಪ ಅವರು ಕೃಷ್ಣಪ್ಪ ಅವರನ್ನು ನೀರಿನಿಂದ ಹೊರಗೆ ತೆಗೆದು ಆರೈಕೆ ಮಾಡಿ ಅಸ್ವಸ್ಥಗೊಂಡಿದ್ದವನನ್ನು ಅಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಶ್ವಾಸಕೋಶಕ್ಕೆ ನೀರು ಹೋಗಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಕೃಷ್ಣಪ್ಪ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಆ 27 ರಂದು ಸಂಜೆ 4.30ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ನೀಡಿರುವ ದೂರಿನ ಮೇರೆಗೆ ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಶಿರ್ಲಾಲು : ಅಂಬಡೆ ಮರದಿಂದ ಕೆರೆ ಬಿದ್ದು ಗಂಭೀರಾವಸ್ಥೆ ತಲುಪಿದ್ದ ವ್ಯಕ್ತಿ ಮೃತ್ಯು Rating: 5 Reviewed By: karavali Times
Scroll to Top