ಸೂಚನೆ ನೀಡದೆ ನಿಲ್ಲಿಸಿದ ಟೆಂಪೋ ಚಾಲಕ : ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಮೃತ್ಯು - Karavali Times ಸೂಚನೆ ನೀಡದೆ ನಿಲ್ಲಿಸಿದ ಟೆಂಪೋ ಚಾಲಕ : ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಮೃತ್ಯು - Karavali Times

728x90

3 September 2026

ಸೂಚನೆ ನೀಡದೆ ನಿಲ್ಲಿಸಿದ ಟೆಂಪೋ ಚಾಲಕ : ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಮೃತ್ಯು

ಬಂಟ್ವಾಳ, ಸೆಪ್ಟೆಂಬರ್ 03, 2026 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಣಂದೂರು ಗ್ರಾಮದ ಪಣಕಜೆ ಮುಹಿಯುದ್ದೀನ್ ಜುಮಾ ಮಸೀದಿ ಮುಂಭಾಗದಲ್ಲಿ ಮಿನಿ ಟೆಂಪೋ ಹಿಂಬದಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಸೆಪ್ಟೆಂಬರ್ 1 ರಂದು ಸಂಜೆ ಸಂಭವಿಸಿದೆ. 

ಮೃತ ಬೈಕ್ ಸವಾರನನ್ನು ರಿನ್ಸ್ ಎಂದು ಹೆಸರಿಸಲಾಗಿದೆ. ಈತ ತನ್ನ ಬೈಕಿನಲ್ಲಿ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಮುಂದಿನಿಂದ ಅಬ್ದುಲ್ಲಾ ಎಸ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಮಿನಿ ಟೆಂಪೋ ಯಾವುದೇ ಸೂಚನೆ ನೀಡದೆ ಹೆದ್ದಾರಿಯಲ್ಲಿ ನಿಲ್ಲಿಸಿದ್ದರಿಂದ ಬೈಕ್ ಸವಾರನ ನಿಯಂತ್ರಣ ಮೀರಿ ಟೆಂಪೋಗೆ ಡಿಕ್ಕಿ ಹೊಡೆದು ಬೈಕ್ ಸಮೇತ ರಸ್ತೆ ಬಿದ್ದಿದ್ದು ಪರಿಣಾಮ ಬೈಕ್ ಸವಾರನ ಎದೆಗೆ ಗಂಭೀರ ಗಾಯವಾಗಿದೆ. 

ತಕ್ಷಣ ಆತನನ್ನು ಅಟೋ ರಿಕ್ಷಾದಲ್ಲಿ ಬೆಳ್ತಂಗಡಿ ಅಭಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು-ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ರಿನ್ಸ್ ಅವರು ರಾತ್ರಿ 11 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಉಜಿರೆ ನಿವಾಸಿ ಚೇತನ್ ಬಿ ಎಸ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸೂಚನೆ ನೀಡದೆ ನಿಲ್ಲಿಸಿದ ಟೆಂಪೋ ಚಾಲಕ : ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಮೃತ್ಯು Rating: 5 Reviewed By: karavali Times
Scroll to Top