ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ಮಂಗಳೂರು ನಗರ ಸಿಸಿಬಿ ಪೆÇಲೀಸರು ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಅಪರಾಧ ತನಿಖಾ ದಳದ (ಎನ್ ಸಿ ಐ ಬಿ) ನಿರ್ದೇಶಕ/ ಅಧಿಕಾರಿ ಎಂದು ಸುಳ್ಳು ಪರಿಚಯ ಮಾಡಿಕೊಂಡು ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿ, ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಕೇರಳ ರಾಜ್ಯದ ಅಲಪ್ಪಿರೋಡ್, ಕೋಯಿಲಾಡ್, ಕೊಲ್ಲಂ ಕವನಾಡು ಮರಿಯಾ ಕಾಟೇಜ್ ನಿವಾಸಿ, ಪ್ರಸ್ತುತ ಉತ್ತರ ಪ್ರದೇಶದ ಲಕ್ನೋ, ಸರೋಜಿನಿ ನಗರ, ಮಾನಸ ನಗರ, ಕಾನ್ಪುರ್ ರೋಡ್, ಚಾಣಕ್ಯಪುರಿ ಎಂಬಲ್ಲಿ ವಾಸ್ತವ್ಯ ಹೊಂದಿರುವ ಸ್ಯಾಮ್ ಪೀಟರ್ ಅಲಿಆಯಸ್ ಡ್ಯಾನಿ ತಾರಕನ್ ಅಲಿಯಾಸ್ ಆಂಟನಿ (64) ಎಂದು ಹೆಸರಿಸಲಾಗಿದೆ.
ಆರೋಪಿ ಶ್ಯಾಮ್ ಪೀಟರ್ ಅಲಿಯಾಸ್ ಟಿ. ಸ್ಯಾಮ್ ಪೀಟರ್/ ರಾಹುಲ್ ಪೀಟರ್ ತನ್ನದೇ ಗ್ಯಾಂಗ್ ರಚಿಸಿಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ, ಹಣಕಾಸು ವಿವಾದಗಳು, ಬ್ಯಾಂಕ್ ವಂಚನೆಗಳು ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ತಾನು ಅಧಿಕಾರ ಹೊಂದಿರುವ ಅಧಿಕಾರಿಯೆಂದು ನಂಬಿಸಿ ಹಣ ಪಡೆದು ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ. ಈ ಸಂಬಂಧ ಮಂಗಳೂರು ಕದ್ರಿ ಪೆÇಲೀಸರು 2019 ರ ಆಗಸ್ಟ್ 16 ರಂದು ಪಂಪ್ ವೆಲ್ ನಲ್ಲಿರುವ ಲಾಡ್ಜಿನಲ್ಲಿ ಕಾರ್ಯಾಚರಣೆ ನಡೆಸಿ, ಶ್ಯಾಮ್ ಪೀಟರ್ ಸೇರಿದಂತೆ ಆತನ ಗ್ಯಾಂಗಿನ 8 ಸದಸ್ಯರನ್ನು ಬಂಧಿಸಿದ್ದರು. ನಂತರ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದು, ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಆರೋಪಿಯು ಬಹು ಹೆಸರುಗಳಿಂದ ಗುರುತಿಸಿಕೊಂಡಿದ್ದು, ತನ್ನ ನಿಜವಾದ ಗುರುತನ್ನು ಮರೆಮಾಚುವ ಉದ್ದೇಶದಿಂದ ವಿವಿಧ ಸ್ಥಳಗಳಲ್ಲಿ ವಿವಿಧ ಹೆಸರುಗಳನ್ನು ಬಳಸಿಕೊಂಡು ವಾಸಿಸುತ್ತಿದ್ದನೆಂದು ತಿಳಿದುಬಂದಿದೆ. ಆತನ ವಿರುದ್ಧ 1) ಆಂಟನಿ, 2) ರಾಹುಲ್ ಪೀಟರ್, 3) ಸ್ಯಾಮ್ ಪೀಟರ್, 4) ರಾಜೇಶ್ ರಾಬಿನ್ಸನ್, 5) ರೀತು ರಿಚರ್ಡ್, 6) ರಾಯ್ ಜೇಕಬ್, 7) ರಾಬಿನ್ ರಿಚರ್ಡ್ಸನ್, 8) ರಾಬಿನ್ ಸನ್ 9) ಆಂಟೋನಿ ಪ್ರಾನ್ಸಿಸ್ 10) ಶಾರೂನ್ ಪ್ರಾನ್ಸಿಸ್ ಹಾಗೂ ಪ್ರಸ್ತುತ 11) ಡ್ಯಾನಿ ತಾರಕನ್ ಸೇರಿದಂತೆ ವಿವಿಧ ಹೆಸರುಗಳನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯು ಒಂದು ಸ್ಥಳದಲ್ಲಿ ಅಪರಾಧ ಎಸಗಿ, ಮತ್ತೊಂದು ಸ್ಥಳಕ್ಕೆ ತೆರಳಿ ತನ್ನ ಹೆಸರನ್ನು ಬದಲಾಯಿಸಿಕೊಂಡು ವಾಸಿಸುವ ಪ್ರವೃತ್ತಿಯನ್ನು ಹೊಂದಿರುತ್ತಾನೆ.
ಆರೋಪಿ ಸ್ಯಾಮ್ ಪೀಟರ್ ಒಬ್ಬ ಕುಖ್ಯಾತ ವಂಚಕನಾಗಿದ್ದು, ‘ರಾಹುಲ್ ಪೀಟರ್’ ಎಂಬ ಅಲಿಯಾಸ್ ಹೆಸರಿನಲ್ಲಿ ಆತನ ವಿರುದ್ಧ 2001ರಿಂದ ಇಂಟಪೆರ್Çೀಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದುದಾಗಿ ತಿಳಿದುಬಂದಿದೆ.
ಆರೋಪಿಯ ವಿರುದ್ಧ ಮಂಗಳೂರು ನಗರದ ಪೂರ್ವ ಪೆÇಲೀಸ್ ಠಾಣೆ, ಉಳ್ಳಾಲ ಪೆÇಲೀಸ್ ಠಾಣೆ, ಕೊಣಾಜೆ ಪೆÇಲೀಸ್ ಠಾಣೆ, ಚಿಕ್ಕಬಳ್ಳಾಪುರ, ಬೆಂಗಳೂರು, ಉಡುಪಿ ನಗರ ಹಾಗೂ ಕುಶಾಲ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮತ್ತು ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ ಘಡ, ಜಾರ್ಖಂಡ್ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಮೋಸ, ವಂಚನೆ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಪ್ರಸ್ತುತ ಆರೋಪಿಯ ವಿರುದ್ಧ ಮಂಗಳೂರು ಉಳ್ಳಾಲ ಪೆÇಲೀಸ್ ಠಾಣೆ ಪ್ರಕರಣದಲ್ಲಿ 17 ಬಾರಿ ವಾರೆಂಟ್ ಹೊರಡಿಸಿರುತ್ತದೆ. ಮತ್ತು ಮಂಗಳೂರು ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಹೊರಡಿಸಿ ಬಳಿಕ ಪೆÇ್ರಕ್ಲೊಮೇಷನ್ (ಉದ್ಘೋಷಣೆ) ಆಗಿರುತ್ತದೆ. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೆÇಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಆರೋಪಿಯ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಪಾನಿನ ಎತ್ತರದ ಪರ್ವತ ಮೌಂಟ್ ಫುಜಿ ಏರಿ ತ್ರಿವರ್ಣ ಧ್ವಜ ಹಾರಿಸಿ ಸಾಹಸ ಮೆರೆದ ಬಂಟ್ವಾಳ ಕಾರ್ತಿಕ್ ಕುಮಾರ್ ಹಾಗೂ ತಂಡ
ಬಂಟ್ವಾಳ, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ಜಪಾನ್‍ನ ಅತಿ ಎತ್ತರದ ಪರ್ವತ ಹಾಗೂ ವಿಶ್ವದ ಪ್ರಸಿದ್ಧ ಶಿಖರಗಳಲ್ಲಿ ಒಂದಾದ ಮೌಂಟ್ ಫುಜಿಯನ್ನು ಏರುವ ಮೂಲಕ ಬಂಟ್ವಾಳದ ಕಾರ್ತಿಕ್ ಕುಮಾರ್ ವೈ ಎಸ್ ಹಾಗೂ ಅವರ ಗೆಳೆಯರು ವಿಶಿಷ್ಟ ಸಾಹಸದ ಸಾಧನೆಗೈದಿದ್ದಾರೆ.
ಕಠಿಣ ಹವಾಮಾನ, ಕಡಿದಾದ ಪರ್ವತ ಮಾರ್ಗ ಹಾಗೂ ಹಲವು ಸವಾಲುಗಳನ್ನು ಎದುರಿಸಿದ ಅವರು, ಛಲ, ಆತ್ಮವಿಶ್ವಾಸ ಮತ್ತು ಸಾಹಸದಿಂದ ಮೌಂಟ್ ಫುಜಿಯ ಶಿಖರವನ್ನು ತಲುಪಿದ್ದಾರೆ. ಶಿಖರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಪ್ರೇಮ ಮೆರೆದಿರುವುದು ಈ ಸಾಧನೆಯ ವಿಶೇಷತೆಯಾಗಿದೆ.
ಜಪಾನ್ ನೆಲದಲ್ಲಿ, ಅಲ್ಲಿನ ಅತ್ಯುನ್ನತ ಶಿಖರದ ಮೇಲೆ ಭಾರತದ ರಾಷ್ಟ್ರಧ್ವಜ ಹಾರಿಸಿದ ಕ್ಷಣವು ಕಾರ್ತಿಕ್ ಕುಮಾರ್ ಹಾಗೂ ಅವರ ಗೆಳೆಯರಿಗೆ ಅವಿಸ್ಮರಣೀಯ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿದೆ. ಸಾಹಸಪ್ರಿಯತೆ, ದೇಶಾಭಿಮಾನ ಹಾಗೂ ಸಾಧಿಸುವ ಛಲಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ.
ಕಾರ್ತಿಕ್ ಕುಮಾರ್ ವೈ ಎಸ್ ಅವರು ಬಂಟ್ವಾಳದ ಬಡ್ಡಕಟ್ಟೆಯ ಶಂಕರ್ ಮತ್ತು ಯಶೋದ ದಂಪತಿಯ ಪುತ್ರ. ಉದ್ಯೋಗ ನಿಮಿತ್ತ ಜಪಾನ್ ದೇಶಕ್ಕೆ ತೆರಳಿರುವ ಅವರು, ಅಲ್ಲಿನ ಪರ್ವತಾರೋಹಣದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೆಳೆಯರೊಂದಿಗೆ ಮೌಂಟ್ ಫುಜಿ ಶಿಖರಾರೋಹಣ ಮಾಡಿದ್ದಾರೆ.
ಮೌಂಟ್ ಫುಜಿ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತಾಯ್ನಾಡಿನ ಹೆಮ್ಮೆಯನ್ನು ವಿದೇಶದ ನೆಲದಲ್ಲೂ ಎತ್ತಿಹಿಡಿದಿರುವ ಕಾರ್ತಿಕ್ ಕುಮಾರ್ ಅವರ ಸಾಹಸಕ್ಕೆ ಬಂಟ್ವಾಳದ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.











0 comments:
Post a Comment