ಸೆ 14 ರಿಂದ 18ರವರೆಗೆ ಬಂಟ್ವಾಳ-ಜಕ್ರಿಬೆಟ್ಟಿ 23ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ : ರೈ - Karavali Times ಸೆ 14 ರಿಂದ 18ರವರೆಗೆ ಬಂಟ್ವಾಳ-ಜಕ್ರಿಬೆಟ್ಟಿ 23ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ : ರೈ - Karavali Times

728x90

11 September 2026

ಸೆ 14 ರಿಂದ 18ರವರೆಗೆ ಬಂಟ್ವಾಳ-ಜಕ್ರಿಬೆಟ್ಟಿ 23ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ : ರೈ

 ಬಂಟ್ವಾಳ, ಸೆಪ್ಟೆಂಬರ್ 11, 2026 (ಕರಾವಳಿ ಟೈಮ್ಸ್) : ಬಂಟ್ವಾಳ-ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯ ಆಶ್ರಯದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14 ರಿಂದ 18 ರವರೆಗೆ ಜಕ್ರಿಬೆಟ್ಟು ಬೈಪಾಸಿನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ತಿಳಿಸಿದರು. 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೆ 11 ರಂದು ಸುದ್ದಿಗಾರರ ಜೊತೆ ಮಾಹಿತಿ ನೀಡಿದ ಅವರು, ಸೆ 14ರಂದು ಬೆಳಗ್ಗೆ 10ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದ್ದು, ಬಳಿಕ ಡಾ ಶಿವಪ್ರಸಾದ್ ರೈ ಮಂಗಳೂರು ಅವರು ಗಣೇಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸೊಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನಗೈಯಲಿದ್ದಾರೆ ಎಂದರು. 

ಐದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಹಲವು ಮಂದಿ ಸ್ವಾಮೀಜಿಗಳು, ರಾಜಕೀಯ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ. ಸೆ 18 ರಂದು ವೈಭವದ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು. 

ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ್ ಜೈನ್, ಪ್ರಮುಖರಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಚೆಂಡ್ತಿಮಾರ್, ಬೇಬಿ ಕುಂದರ್, ಕೆ ಪದ್ಮನಾಭ ರೈ, ಸದಾಶಿವ ಬಂಗೇರ, ಸುದೀಪ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆರ್ ಅಂಚನ್, ಚಂದ್ರಶೇಖರ ಭಂಡಾರಿ, ಸುರೇಶ್ ಪೂಜಾರಿ ಜಕ್ರಿಬೆಟ್ಟು, ಪ್ರವೀಣ್ ಜಕ್ರಿಬೆಟ್ಟು, ದೇವಪ್ಪ ಕುಲಾಲ್ ಪಂಜಿಕಲ್ಲು, ಸುಧಾಕರ ಶೆಣೈ ಖಂಡಿಗ, ಮನೋಹರ ನೆರಂಬೊಳು, ಸುವರ್ಣ ಜೈನ್, ಮಾಣಿಕ್ಯ ರಾಜ್ ಜೈನ್, ಅಶೋಕ್ ಭಂಡಾರಿ, ಸಂತೋಷ್ ಪೂಜಾರಿ, ಆದೇಶ್ ಕುಮಾರ್ ಜೈನ್, ಜಿ ಎ ಇಕ್ಬಾಲ್ ಮೊದಲಾದವರು ಇದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸೆ 14 ರಿಂದ 18ರವರೆಗೆ ಬಂಟ್ವಾಳ-ಜಕ್ರಿಬೆಟ್ಟಿ 23ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ : ರೈ Rating: 5 Reviewed By: karavali Times
Scroll to Top