ಮಂಗಳೂರು, ಸೆಪ್ಟೆಂಬರ್ 09, 2026 (ಕರಾವಳಿ ಟೈಮ್ಸ್) : ಕಾವೂರು ಪೆÇಲೀಸ್ ಠಾಣಾ ಕಳವು ಪ್ರಕರಣದ ಆರೋಪಿಯಾಗಿದ್ದು, ಕಳೆದ 5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಲ್ ಪಿ ಸಿ ವಾರಂಟ್ ಮಹಿಳಾ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು-ಆಕಾಶಭವನ ಆನಂದ ನಗರ ನಿವಾಸಿ ಲತಾ ಮರಿಯಾ ಕೋಂ ದಿವಂಗತ ಲಾಸ್ರಾದೋ ಮಾರಿಯಾ (44) ಎಂದು ಹೆಸರಿಸಲಾಗಿದೆ. ಈಕೆಯನ್ನು ಕಾವೂರು ಪೊಲೀಸರು ಜ್ಯೋತಿ ನಗರದಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.











0 comments:
Post a Comment