ಕಾವೂರು ಪೊಲೀಸರ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ಆರೋಪಿ ಬಂಧನ - Karavali Times ಕಾವೂರು ಪೊಲೀಸರ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ಆರೋಪಿ ಬಂಧನ - Karavali Times

728x90

30 September 2026

ಕಾವೂರು ಪೊಲೀಸರ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ಆರೋಪಿ ಬಂಧನ

ಮಂಗಳೂರು, ಸೆಪ್ಟೆಂಬರ್ 30, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಎಂಡಿಎಂಎ ಹೊಂದಿದ ವ್ಯಕ್ತಿಯನ್ನು ಕಾವೂರು ಪೊಲೀರು ಬಂಧಿಸಿದ ಘಟನೆ ಮರಕಡ ಗ್ರಾಮದ ಬೋಂದೆಲ್ ಎಂಬಲ್ಲಿ ಸೆ 29 ರಂದು ನಡೆದಿದೆ. 

ಬಂಧಿತ ಆರೋಪಿಯನ್ನು ಉಳ್ಳಾಲ ತಾಲೂಕು, ಅಜ್ಜಿನಡ್ಕ ಗ್ರಾಮದ ಕೋಟೆಕಾರು, ಕೆ ಸಿ ರೋಡು, ಯು ಜಿ ಗೇಟ್ ರುಕ್ಷಾನಾ ಮಂಝಿಲ್ ನಿವಾಸಿ ಎ ಕೆ ಖಾಸಿಂ ಅವರ ಪುತ್ರ ಮೊಹಮ್ಮದ್ ಇರ್ಫಾನ್ ಎ ಕೆ (26) ಎಂದು ಹೆಸರಿಸಲಾಗಿದೆ. 

ಕಾವೂರು ಪೆÇಲೀಸರು ಸೆ 29 ರಂದು ಮರಕಡ ಗ್ರಾಮದ ಬೊಂದೇಲ್ ನಿಂದ ಮೂಡುಶೆಡ್ಡೆ ಕಡೆಗೆ ಹೋಗುವ ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತನ ವಶದಲ್ಲಿದ್ದ ಸುಮಾರು 1.60 ಲಕ್ಷ ರೂಪಾಯಿ ಮೌಲ್ಯದ 16 ಗ್ರಾಂ ತೂಕದ ಎಂಡಿಎಂಎ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಕಾವೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2026 ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಬಂಧಿತ ಆರೋಪಿಯ ವಿರುದ್ದ ಈಗಾಗಲೇ ಉಳ್ಳಾಲ ಹಾಗೂ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ರಾತ್ರಿ ಕಳ್ಳತನ ಹಾಗೂ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾವೂರು ಪೊಲೀಸರ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ಆರೋಪಿ ಬಂಧನ Rating: 5 Reviewed By: karavali Times
Scroll to Top