ಮಂಗಳೂರು, ಸೆಪ್ಟೆಂಬರ್ 11, 2026 (ಕರಾವಳಿ ಟೈಮ್ಸ್) : ಹಿರಿಯ ನಾಗರಿಕರ ಸೌಹಾರ್ದ ಸೇವಾ ಸಮಿತಿ (ರಿ) ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸಭೆ ಸೆ 8 ರಂದು ಸಮಿತಿ ಕಛೇರಿಯಲ್ಲಿ ನಡೆಯಿತು.
ಸಮಿತಿಯ ಉಪಾಧ್ಯಕ್ಷ ಅಚ್ಚುತ ಸಂಪಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ವಿ ಇಬ್ರಾಹಿಂ ನಡುಪದವು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಭಾರತ ಬ್ಯಾರಿ ಪರಿಷತ್ ನಿರ್ಗಮನ ಅಧ್ಯಕ್ಷ ಯು ಎಚ್ ಖಾಲಿದ್ ಉಜಿರೆ ಅವರನ್ನು ಸನ್ಮಾನಿಸಿದರು.
ಅಹಿಂದ ಚಳುವಳಿಯ ಅಧ್ಯಕ್ಷ ಭರತೇಶ್ ಬಜಾಲ್ ಭಾಗವಹಿಸಿದ್ದರು. ಹಸನಬ್ಬ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಯೂಸುಫ್ ವಕ್ತಾರ್ ಸ್ವಾಗತಿಸಿ, ಕಾರ್ಯದರ್ಶಿ ಮಹಮ್ಮದ್ ಹನೀಫ್ ಗ್ರೀನ್ ವೀವ್ ವಂದಿಸಿದರು.

















0 comments:
Post a Comment