ಕಲ್ಲಡ್ಕದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ - Karavali Times ಕಲ್ಲಡ್ಕದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ - Karavali Times

728x90

16 September 2026

ಕಲ್ಲಡ್ಕದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಬಂಟ್ವಾಳ, ಸೆಪ್ಟೆಂಬರ್ 16, 2026 (ಕರಾವಳಿ ಟೈಮ್ಸ್) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗೋಳ್ತಮಜಲು ಮತ್ತು ಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ಬಾಳ್ತಿಲ ವಲಯದ ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಪೆÇೀಷಣ್ ಮಾಸಾಚಾರಣೆ-2026 ಕಾರ್ಯಕ್ರಮ ಕಲ್ಲಡ್ಕ-ಪೂರ್ಲಿಪ್ಪಾಡಿ ಮರಾಠಿ ಭವನದಲ್ಲಿ ಸೆ 16 ರಂದು ನಡೆಯಿತು. 

ಮಾಜಿ ಶಾಸಕ ರುಕ್ಮಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಶ್ರೀಮತಿ ಮಮ್ತಾಜ್ ಎಚ್ ಐ ಅವರು ಪೆÇೀಷಣ್ ಮಾಸಾಚರಣೆಯ ಉದ್ದೇಶದ ಬಗ್ಗೆ ವಿವರಿಸಿದರು. ವೈದ್ಯಾಧಿಕಾರಿ ಡಾ ಜಯಪ್ರಕಾಶ್ ಅವರು ಗರ್ಭಿಣಿ, ಬಾಣಂತಿಯರ ಸಮತೋಲಿತ ಪೌಷ್ಟಿಕ ಆಹಾರ ಸೇವನೆ ಮತ್ತು ಆರೈಕೆ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕಿ ಶ್ರೀಮತಿ ಅಕ್ಷತಾ ಅವರು ಜಂಕ್ ಫುಡ್ ಸೇವನೆಯ ಮಾರಕತೆ ಹಾಗೂ ಮನೆ ಆಹಾರದ ಪೂರಕತೆಯ ಬಗ್ಗೆ ಮಾತನಾಡಿದರು. 

ಇದೇ ವೇಳೆ 21 ಗರ್ಭಿಣಿಯರಿಗೆ ಸೀಮಂತ  ಹಾಗೂ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಕೋಮಾಲಿ, ಬಾಳ್ತಿಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ ಆಳ್ವ, ಗೋಳ್ತಮಜಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್, ಸುರಕ್ಷಾ ಸಂಗಮದ ಗೌರವಾಧ್ಯಕ್ಷ ವೆಂಕಟರಾಯ ಪ್ರಭು, ಮರಾಠಿ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲ ನಾಯಕ, ಪೆÇೀಷಣ್ ಅಭಿಯಾನದ ತಾಲೂಕು ಸಂಯೋಜಕಿ  ಶ್ರೀಮತಿ ನವ್ಯ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳ ಪೆÇೀಷಕರು, ಬಾಲವಿಕಾಸ ಸಮಿತಿ ಅಧ್ಯಕ್ಷರು, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. 

ವಲಯ ಮೇಲ್ವಿಚಾರಕಿ ಶ್ರೀಮತಿ ಗುಲಾಬಿ ಸ್ವಾಗತಿಸಿ, ನೆಟ್ಲ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಅರುಣ ವಂದಿಸಿದರು. ಮುಲಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ Rating: 5 Reviewed By: karavali Times
Scroll to Top