ಮಾಜಿ ಸಚಿವ ರಮಾನಾಥ ರೈ 75ನೇ ಹುಟ್ಟುಹಬ್ಬದ ಪ್ರಯುಕ್ತ ಹಲವು ಜನಪರ ಕಾರ್ಯಕ್ರಮಗಳು : ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ - Karavali Times ಮಾಜಿ ಸಚಿವ ರಮಾನಾಥ ರೈ 75ನೇ ಹುಟ್ಟುಹಬ್ಬದ ಪ್ರಯುಕ್ತ ಹಲವು ಜನಪರ ಕಾರ್ಯಕ್ರಮಗಳು : ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ - Karavali Times

728x90

13 September 2026

ಮಾಜಿ ಸಚಿವ ರಮಾನಾಥ ರೈ 75ನೇ ಹುಟ್ಟುಹಬ್ಬದ ಪ್ರಯುಕ್ತ ಹಲವು ಜನಪರ ಕಾರ್ಯಕ್ರಮಗಳು : ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ

ಬಂಟ್ವಾಳ, ಸೆಪ್ಟೆಂಬರ್ 13, 2026 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ರೈ ಅವರ ಜೀವನದ 75 ವರ್ಷಗಳ ಸಾಧನೆಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಹಾಗೂ ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಬಿ ರಮಾನಾಥ ರೈ 75ನೇ ವರ್ಷದ ಹುಟ್ಟು ಹಬ್ಬ ಆಚರಣಾ ಸಮಿತಿ ವತಿಯಿಂದ ಮುಂದಿನ ಆರು ತಿಂಗಳ ಕಾಲ ವಿವಿಧ ಜನೋಪಯೋಗಿ ಹಾಗೂ ಜನಸೇವಾ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭವು ರಮಾನಾಥ ರೈ ಅವರ ಹುಟ್ಟಿದ ದಿನವಾಗಿರುವ ಸೆಪ್ಟೆಂಬರ್ 13 ರಂದು ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬ ಆಚರಣಾ ಸಮಿತಿಯ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ಹಾಗೂ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಹಮ್ಮಿಕೊಳ್ಳಲಾಗಿರುವ ವಿವಿಧ ಜನಪರ ಕಾರ್ಯಕ್ರಮಗಳ ವಿವರ ನೀಡಿದರು. 

ಸಮಾರಂಭದಲ್ಲಿ ಬಿ ಸಿ ರೋಡು-ಸಂಚಯಗಿರಿ ರಾಣಿ ಅಬ್ಬಕ್ಕ ಆಧ್ಯಯನ ಕೇಂದ್ರದ ಸ್ಥಾಪಕ ಪ್ರೊ ತುಕಾರಾಂ ಪೂಜಾರಿ ರಮಾನಾಥ ರೈ ಅವರ ಬಗ್ಗೆ ಮಾತನಾಡಿದರು. ಪ್ರಮುಖರಾದ ಮಮತಾ ಡಿ ಎಸ್ ಗಟ್ಟಿ, ಲಾವಣ್ಯ ಬಳ್ಳಾಲ್, ಎಂ ಎಸ್ ಮುಹಮ್ಮದ್, ಮಲ್ಲಿಕಾ ಶೆಟ್ಟಿ, ಎಂ ಅಶ್ವನಿ ಕುಮಾರ್ ರೈ, ಬಿ ಪದ್ಮಶೇಖರ ಜೈನ್, ಮುಸ್ತಫಾ ಸುಳ್ಯ, ಚಂದ್ರಶೇಖರ ಭಂಡಾರಿ, ಬಿ ಆರ್ ಅಂಚನ್, ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯೂಸುಫ್ ಕರಂದಾಡಿ, ಕೆ ಪದ್ಮನಾಭ ರೈ, ಐಡಾ ಸುರೇಶ್, ಬಿ ವಾಸು ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಜಯಂತಿ ಪೂಜಾರಿ, ಇಬ್ರಾಹಿಂ ನವಾಝ್, ಕೆ ಕೆ ಶಾಹುಲ್ ಹಮೀದ್, ಸದಾಶಿವ ಬಂಗೇರ, ಧರಣೇಂದ್ರ ಕುಮಾರ್, ಚಂದ್ರಹಾಸ ಪಲ್ಲಿಪ್ಪಾಡಿ, ರಾಜೀವ್ ಶೆಟ್ಟಿ ಎಡ್ತೂರು, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರವೀಣ್ ಸುದರ್ಶನ್ ಜೈನ್, ನ್ಯಾಯವಾದಿ ಸುರೇಶ್ ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಸಚಿವ ರಮಾನಾಥ ರೈ 75ನೇ ಹುಟ್ಟುಹಬ್ಬದ ಪ್ರಯುಕ್ತ ಹಲವು ಜನಪರ ಕಾರ್ಯಕ್ರಮಗಳು : ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ Rating: 5 Reviewed By: karavali Times
Scroll to Top