ತಲಪಾಡಿ : ರಸ್ತೆ ಬದಿಯ ಬ್ಯಾರಿಯರಿಗೆ ಸ್ಕೂಟರ್ ಡಿಕ್ಕಿಯಾಗಿ ಡೈಮಂಡ್ ಶಾಲೆಯ ಉಪಪ್ರಾಂಶುಪಾಲ ಮೃತ್ಯು - Karavali Times ತಲಪಾಡಿ : ರಸ್ತೆ ಬದಿಯ ಬ್ಯಾರಿಯರಿಗೆ ಸ್ಕೂಟರ್ ಡಿಕ್ಕಿಯಾಗಿ ಡೈಮಂಡ್ ಶಾಲೆಯ ಉಪಪ್ರಾಂಶುಪಾಲ ಮೃತ್ಯು - Karavali Times

728x90

2 September 2026

ತಲಪಾಡಿ : ರಸ್ತೆ ಬದಿಯ ಬ್ಯಾರಿಯರಿಗೆ ಸ್ಕೂಟರ್ ಡಿಕ್ಕಿಯಾಗಿ ಡೈಮಂಡ್ ಶಾಲೆಯ ಉಪಪ್ರಾಂಶುಪಾಲ ಮೃತ್ಯು

ಬಂಟ್ವಾಳ, ಸೆಪ್ಟೆಂಬರ್ 02, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಸ್ಕೂಟರ್ ಉರುಳಿ ಬಿದ್ದು ಬಿ ಸಿ ರೋಡು ಸಮೀಪದ ತಲಪಾಡಿ ಡೈಮಂಡ್ ಶಾಲಾ ಶಿಕ್ಷಕರೋರ್ವರು ಮೃತಪಟ್ಟ ಘಟನೆ ಸೆಪ್ಟೆಂಬರ್ 2 ರಂದು ಬೆಳಿಗ್ಗೆ ಸಂಭವಿಸಿದೆ. 

ಮೃತರನ್ನು ಅಮ್ಟಾಡಿ ಗ್ರಾಮದ ಬಾಳಿಗಾ ಹೌಸ್ ನಿವಾಸಿ, ತಲಪಾಡಿ ಡೈಮಂಡ್ ಶಾಲಾ ಉಪಪ್ರಾಂಶುಪಾಲ ಅನಿಲ್ ಎಸ್ ನಾಯಕ್ (72) ಎಂದು ಹೆಸರಿಸಲಾಗಿದೆ. ಇವರು ಸ್ಕೂಟರಿನಲ್ಲಿ ಬುಧವಾರ ಬೆಳಿಗ್ಗೆ ಶಾಲೆಗೆ ಬರುತ್ತಿದ್ದ ವೇಳೆ ತಲಪಾಡಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದಲ್ಲಿ ರಸ್ತೆ ಬದಿಯ ಬ್ಯಾರಿಯರಿಗೆ ಡಿಕ್ಕಿ ಹೊಡೆದು ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಮೃತರು ಕಳೆದ ಐದಾರು ವರ್ಷಗಳಿಂದ ತಲಪಾಡಿ ಡೈಮಂಡ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರ ಗೌರವಾರ್ಥ ಬುದವಾರ ಡೈಮಂಡ್ ಶಾಲೆಗೆ ರಜೆ ಘೋಷಿಸಿಸಲಾಗಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿ : ರಸ್ತೆ ಬದಿಯ ಬ್ಯಾರಿಯರಿಗೆ ಸ್ಕೂಟರ್ ಡಿಕ್ಕಿಯಾಗಿ ಡೈಮಂಡ್ ಶಾಲೆಯ ಉಪಪ್ರಾಂಶುಪಾಲ ಮೃತ್ಯು Rating: 5 Reviewed By: karavali Times
Scroll to Top