ಬೋಳಂಗಡಿ : ಬೈಕ್ ಸವಾರನಿಂದ ಹಿಟ್ ಆಂಡ್ ರನ್ : ಸ್ಕೂಟರ್ ಸವಾರರಿಬ್ಬರಿಗೆ ಗಾಯ - Karavali Times ಬೋಳಂಗಡಿ : ಬೈಕ್ ಸವಾರನಿಂದ ಹಿಟ್ ಆಂಡ್ ರನ್ : ಸ್ಕೂಟರ್ ಸವಾರರಿಬ್ಬರಿಗೆ ಗಾಯ - Karavali Times

728x90

29 September 2026

ಬೋಳಂಗಡಿ : ಬೈಕ್ ಸವಾರನಿಂದ ಹಿಟ್ ಆಂಡ್ ರನ್ : ಸ್ಕೂಟರ್ ಸವಾರರಿಬ್ಬರಿಗೆ ಗಾಯ

ಬಂಟ್ವಾಳ, ಸೆಪ್ಟೆಂಬರ್ 29, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬೋಳಂಗಡಿ ಎಂಬಲ್ಲಿ ಸ್ಕೂಟರಿಗೆ ಹಿಂದಿಯಿಂದ ಬಂದ ಬೈಕ್ ಸವಾರ ಹಿಟ್ ಆಂಡ್ ರನ್ ನಡೆಸಿದ ಪರಿಣಾಮ ಇಬ್ಬರು ಸ್ಕೂಟರ್ ಸವಾರರು ಗಾಯಗೊಂಡ ಘಟನೆ ಸೆ 27 ರಂದು ರಾತ್ರಿ ವೇಳೆ ಸಂಭವಿಸಿದೆ. 

ಗಾಯಾಳು ಸ್ಕೂಟರ್ ಸವಾರರನ್ನು ಬಿ ಮೂಡ ಗ್ರಾಮದ ಮಧ್ವ ನಿವಾಸಿ ಇಲಿಯಾಸ್ ಇಬ್ರಾಹಿಂ (50) ಹಾಗೂ ಅವರ ಸ್ನೇಹಿತ ಆಸೀಫ್ ಎಂದು ಹೆಸರಿಸಲಾಗಿದೆ. ಆಸೀಫ್ ಸವಾರರಾಗಿ ಇಲಿಯಾಸ್ ಅವರು ಸಹಸವಾರರಾಗಿ ಸ್ಕೂಟರಿನಲ್ಲಿ ಕಲ್ಲಡ್ಕ ಕಡೆಯಿಂದ ಕೈಕಂಬ ಕಡೆಗೆ ಬರುತ್ತಿದ್ದ ವೇಳೆ ಬೋಳಂಗಡಿ ಪುಳಿಮುಂಚಿ ಹೋಟೆಲ್ ಎದುರುಗಡೆಗೆ ತಲುಪಿದಾಗ ಹಿಂದಿನಿಂದ ವಿಶ್ವನಾಥ್ ಗೌಡ ಅವರು ಚಲಾಯಿಸಿಕೊಂಡು ಬಂದ ಬೈಕ್ ಹಿಂದಿನಿಂದ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಎಡರೂ ದ್ವಿಚಕ್ರ ವಾಹನ ಸವಾರರು ವಾಹನಗಳ ಸಹಿತ ರಸ್ತೆಗೆ ಬಿದ್ದಿದ್ದು, ಈ ಪೈಕಿ ಬೈಕ್ ಸವಾರ ವಿಶ್ವನಾಥ ಅವರು ತಾನಾಗಿ ಎದ್ದು ಬೈಕಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. 

ಬಳಿಕ ಸ್ಥಳೀಯರು ರಸ್ತೆಗೆ ಬಿದ್ದು ಗಾಯಗೊಂಡಿದ್ದ ಸ್ಕೂಟರ್ ಸವಾರರನ್ನು ಉಪಚಿರಿಸಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಬಳಿಕ ಅಲ್ಲಿಂದ ಆಸೀಫ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ತೇಜಸ್ವಿನಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಇಲಿಯಾಸ್ ಇಬ್ರಾಹಿಂ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೋಳಂಗಡಿ : ಬೈಕ್ ಸವಾರನಿಂದ ಹಿಟ್ ಆಂಡ್ ರನ್ : ಸ್ಕೂಟರ್ ಸವಾರರಿಬ್ಬರಿಗೆ ಗಾಯ Rating: 5 Reviewed By: karavali Times
Scroll to Top