ಮೈಸೂರು ದಸರಾ ಕಂಬಳ : ಹೆಸರು ನೋಂದಣಿಗೆ ಸೂಚನೆ, ಸೆಪ್ಟೆಂಬರ್ 30 ಕೊನೆ ದಿನ - Karavali Times ಮೈಸೂರು ದಸರಾ ಕಂಬಳ : ಹೆಸರು ನೋಂದಣಿಗೆ ಸೂಚನೆ, ಸೆಪ್ಟೆಂಬರ್ 30 ಕೊನೆ ದಿನ - Karavali Times

728x90

29 September 2026

ಮೈಸೂರು ದಸರಾ ಕಂಬಳ : ಹೆಸರು ನೋಂದಣಿಗೆ ಸೂಚನೆ, ಸೆಪ್ಟೆಂಬರ್ 30 ಕೊನೆ ದಿನ

ಮಂಗಳೂರು, ಸೆಪ್ಟೆಂಬರ್ 29, 2026 (ಕರಾವಳಿ ಟೈಮ್ಸ್) : ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ ‘ದಸರಾ ಕಂಬಳ’ ಕ್ರೀಡಾಕೂಟದ ನೋಂದಣಿಗೆ ಸಂಬಂಧಿಸಿದಂತೆ ಮೈಸೂರು ದಸರಾ-2026ರ ಅಧಿಕೃತ ಆಕರ್ಷಣೆಯಾಗಿ ಜಾನಪದ ಕ್ರೀಡೆಯಾದ ಕಂಬಳವು ಮೂಡಿಬರಲಿದ್ದು, ಸ್ಪರ್ಧಾ ಕೂಟಗಳ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್ ಲೈನ್ ಪೋರ್ಟಲ್ ಈಗ ಮುಕ್ತವಾಗಿದೆ.

ಮೈಸೂರಿನ ಸಾತಗಳ್ಳಿ ಹೊರವರ್ತುಲ ರಸ್ತೆ (ವಿಟಿಯು ಪ್ರಾದೇಶಿಕ ಕೇಂದ್ರದ ಹತ್ತಿರ) ಆಯೋಜಿಸಲಾಗಿರುವ ಈ ಐತಿಹಾಸಿಕ ದಸರಾ ಕಂಬಳದಲ್ಲಿ ಭಾಗವಹಿಸಲು ಕಂಬಳದ ಕೋಣಗಳ ಮಾಲೀಕರು ಮತ್ತು ಓಡಿಸುವ ಜಾನಪದ ವೀರರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. 

     ಆಸಕ್ತರು ಹೆಚ್ಚಿನ ವಿವರಗಳಿಗೆ ಮತ್ತು ಆನ್ ಲೈನ್ ನೋಂದಣಿಗಾಗಿ hಣಣಠಿs://mಥಿsoಡಿeಜಚಿsಚಿಡಿಚಿ.gov.iಟಿ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದ್ದು, ಪ್ರವೇಶಾತಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನ. ಭೌತಿಕ ಪ್ರತಿಯ ಅರ್ಜಿಗಳನ್ನು ಮೈಸೂರು ಜಿಲ್ಲಾ ಪಂಚಾಯತ್ ಕಛೇರಿಯಿಂದ ಪಡೆದುಕೊಳ್ಳಬಹುದಾಗಿದೆ ಎಂದು  ಕಂಬಳ ಉಪ ಸಮಿತಿ ಕಾರ್ಯಾಧ್ಯಕ್ಷರು ಹಾಗೂ  ಮೈಸೂರು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮೈಸೂರು ದಸರಾ ಕಂಬಳ : ಹೆಸರು ನೋಂದಣಿಗೆ ಸೂಚನೆ, ಸೆಪ್ಟೆಂಬರ್ 30 ಕೊನೆ ದಿನ Rating: 5 Reviewed By: karavali Times
Scroll to Top