ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು : 17 ಜಾನುವಾರು ಸಹಿತ ಓರ್ವ ಆರೋಪಿ ಅರೆಸ್ಟ್, ಇಬ್ಬರು ಪರಾರಿ - Karavali Times ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು : 17 ಜಾನುವಾರು ಸಹಿತ ಓರ್ವ ಆರೋಪಿ ಅರೆಸ್ಟ್, ಇಬ್ಬರು ಪರಾರಿ - Karavali Times

728x90

22 September 2026

ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು : 17 ಜಾನುವಾರು ಸಹಿತ ಓರ್ವ ಆರೋಪಿ ಅರೆಸ್ಟ್, ಇಬ್ಬರು ಪರಾರಿ

ಮಂಗಳೂರು, ಸೆಪ್ಟೆಂಬರ್ 22, 2026 (ಕರಾವಳಿ ಟೈಮ್ಸ್) : ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಕಂಕನಾಡಿ ನಗರ ಠಾಣಾ ಪೊಲೀಸರು 17 ಜಾನುವಾರು, ವಾಹನ ಸಹಿತ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ ಘಟನೆ ಪಡೀಲ್ ಟೊಯೋಟಾ ಕಾರು ಶೋರೂಂ ಬಳಿ ಸೆ 22 ರಂದು ಮುಂಜಾನೆ ನಡೆದಿದೆ. 

ಬಂಧಿತ ಆರೋಪಿ, ಲಾರಿ ಚಾಲಕನನ್ನು ಹಾಸನ ಜಿಲ್ಲೆಯ ವಿಶ್ವನಾಥ ನಗರ ಲೇಔಟ್, ಹುಣಸಿನಕೆರೆ ರೋಡ್ ಸ್ಲಂ ಬೋರ್ಡ್ ನಿವಾಸಿ ದಿವಂಗತ ಗಫೂರ್ ಎಂಬವರ ಪುತ್ರ ಸಾಧಿಕ್ ಜಿ (23) ಎಂದು ಹೆಸರಿಸಲಾಗಿದ್ದು, ಲಾರಿಯಲ್ಲಿದ್ದ ಮತ್ತಿಬ್ಬರು ಆರೋಪಿಗಳಾದ ಸುಭಾನ್ ಹಾಗೂ ರೆಹಮಾನ್ ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಸೆ 22 ರಂದು ಕಂಕನಾಡಿ ನಗರ ಪೆÇಲೀಸ್ ಠಾಣಾ ಪಿಎಸ್ಸೈ ಅವರು ಸಿಬ್ಬಂದಿ ಜೊತೆ ಬೆಳಗಿನ ಜಾವ  ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಈಚರ್ ಲಾರಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಮೇರೆಗೆ ಪೆÇಲೀಸರು ಬೆಳಿಗ್ಗೆ 6.30 ರ ವೇಳೆ ಆಡ್ಯಾರು ಕಡೆಯಿಂದ ಮಂಗಳೂರು ನಗರದ ಕಡೆಗೆ ಬರುತ್ತಿದ್ದ ಕಂದು ಬಣ್ಣದ ಈಚರ್ ಲಾರಿಯನ್ನು ಬೆನ್ನಟ್ಟಿ ಪಡೀಲ್ ಟೊಯೋಟಾ ಕಾರ್ ಶೋರೂಂ ಎದುರು ತಡೆದು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಲಾರಿಯ ಬಾಡಿಯನ್ನು ಹಸಿರು ಬಣ್ಣದ ಟರ್ಪಾಲಿನಿಂದ ಮುಚ್ಚಲಾಗಿದ್ದು, ಲಾರಿಯಲ್ಲಿ ಒಟ್ಟು 17 ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೊಂದು ಬಿಗಿಯಾಗಿ ಹಗ್ಗಗಳಿಂದ ಲಾರಿಯ ಬಾಡಿಯ ಕಬ್ಬಿಣದ ಕ್ಯಾರಿಯೇಜಿಗಳಿಗೆ ಕಟ್ಟಿ, ಕತ್ತುಗಳನ್ನು ಮೇಲಕ್ಕೆತ್ತಿ, ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಲಾರಿಯಲ್ಲಿದ್ದ 17 ಜಾನುವಾರುಗಳು, ಲಾರಿ ಹಾಗೂ ಆರೋಪಿ ಸಾದಿಕ್ ಸಹಿತ ಆತನ ಮೊಬೈಲ್ ಫೆÇೀನ್ ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು : 17 ಜಾನುವಾರು ಸಹಿತ ಓರ್ವ ಆರೋಪಿ ಅರೆಸ್ಟ್, ಇಬ್ಬರು ಪರಾರಿ Rating: 5 Reviewed By: karavali Times
Scroll to Top