ಬೆಂಗಳೂರು, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : 2026-27ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅ 29 ರಂದು ಪ್ರಕಟಿಸಿದೆ.
ಪ್ರಕಟವಾದ ಅಂತಿಮ ವೇಳಾಪಟ್ಟಿ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27 ರಿಂದ ಮಾರ್ಚ್ 18ರವರೆಗೆ ಹಾಗೂ ಪರೀಕ್ಷೆ-2 ಮೇ 3 ರಿಂದ ಮೇ 15ರವರೆಗೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಎಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31ರ ವರೆಗೆ ನಡೆಯಲಿದೆ. ನಡೆಯಲಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ 1 ವೇಳಾಪಟ್ಟಿ :
ಮಾರ್ಚ್ 22 ರಂದು ಪ್ರಥಮ ಭಾಷೆ, 25 ರಂದು ವಿಜ್ಞಾನ, 27 ರಂದು ದ್ವೀತಿಯ ಭಾಷೆ, 30 ರಂದು ಗಣಿತ, ಎಪ್ರಿಲ್ 2 ರಂದು ತೃತೀಯ ಭಾಷೆ, 5 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ-2 ವೇಳಾಪಟ್ಟಿ :
ಮೇ 24 ರಂದು ಪ್ರಥಮ ಭಾಷೆ, 25 ರಂದು ವಿಜ್ಞಾನ, 26 ರಂದು ದ್ವೀತಿಯ ಭಾಷೆ, 27 ರಂದು ಗಣಿತ, 28 ರಂದು ತೃತೀಯ ಭಾಷೆ, 29 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ :
ಫೆಬ್ರವರಿ 27 ರಂದು ಕನ್ನಡ, ಅರೇಬಿಕ್, ಮಾರ್ಚ್ 1 ರಂದು ಇಂಗ್ಲಿಷ್, 2 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ ಉರ್ದು, ಸಂಸ್ಕೃತ, ಫ್ರೆಂಚ್, ಮಾರ್ಚ್ 3 ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, 4 ರಂದು ಸಮಾಜಶಾಸ್ತ್ರ, ಭೌತಶಾಸ್ತ್ರ, 5 ರಂದು ಲೆಕ್ಕಶಾಸ್ತ್ರ, 8 ರಂದು ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ, 9 ರಂದು ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ., 11 ರಂದು ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋ ಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ, 12 ರಂದು ವ್ಯವಹಾರ ಅಧ್ಯಯನ, ಗಣಿತ, 13 ರಂದು ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಗೃಹ ವಿಜ್ಞಾನ, 15 ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ,, ಗಣಕ ವಿಜ್ಞಾನ, 16 ರಂದು ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, 17 ರಂದು ಹಿಂದಿ ಹಾಗೂ ಮಾರ್ಚ್ 18 ರಂದು ಇತಿಹಾಸ ಪರೀಕ್ಷೆಗಳು ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 2 ವೇಳಾಪಟ್ಟಿ :
ಮೇ 3 ರಂದು ಕನ್ನಡ, ಅರೇಬಿಕ್, 4 ರಂದು ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, 5 ರಂದು ರಾಜ್ಯಶಾಸ್ತ್ರ, ಗಣಕ ವಿಜ್ಞಾನ, 6 ರಂದು ಇತಿಹಾಸ, ರಸಾಯನಶಾಸ್ತ್ರ, 7 ರಂದು ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ, 8 ರಂದು ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ, 10 ರಂದು ಅರ್ಥಶಾಸ್ತ್ರ, ಗಣಿತ, 11 ರಂದು ಹಿಂದಿ, 12 ರಂದು ಇಂಗ್ಲಿಷ್, 13 ರಂದು ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, 14 ರಂದು ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ ಹಾಗೂ ಮೇ 15 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ, ಡಿಟೇಲ್ ಆಟೋಮೊಬೈಲ್ ಪರೀಕ್ಷೆಗಳು ನಡೆಯಲಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.











0 comments:
Post a Comment