ದಾಸಕೋಡಿ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದ್ದ ಕೂಲಿ ಕಾರ್ಮಿಕ ದಾರುಣ ಮೃತ್ಯು - Karavali Times ದಾಸಕೋಡಿ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದ್ದ ಕೂಲಿ ಕಾರ್ಮಿಕ ದಾರುಣ ಮೃತ್ಯು - Karavali Times

728x90

1 October 2026

ದಾಸಕೋಡಿ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದ್ದ ಕೂಲಿ ಕಾರ್ಮಿಕ ದಾರುಣ ಮೃತ್ಯು

ಬಂಟ್ವಾಳ, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ಸೆ 30 ರಂದು ಸಂಜೆ ವೇಳೆ ಸಂಭವಿಸಿದೆ. 

ಮೃತರನ್ನು ಇಲ್ಲಿನ ನಿವಾಸಿ, ಕೂಲಿ ಕಾರ್ಮಿಕ ಹರೀಶ್ (46) ಎಂದು ಹೆಸರಿಸಲಾಗಿದೆ. ಇವರು ಬುಧವಾರ ಸಂಜೆ ಕೆಲಸ ಬಿಟ್ಟು ಬಸ್ಸಿನಲ್ಲಿ ಬಂದು ದಾಸಕೋಡಿಯಲ್ಲಿ ಇಳಿದು ಮನೆಗೆ ಹೋಗಲು ಹೆದ್ದಾರಿ ದಾಟುತ್ತಿದ್ದ ವೇಳೆ ಮಹಮ್ಮದ್ ಇರ್ಫಾನ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಕಾರಿನ ಗ್ಲಾಸ್ ಮತ್ತು ಬಾನೆಟ್ ಮೇಲೆ ಬಿದ್ದ ಹರೀಶ್ ಅವರು ಬಳಿಕ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವಿನಾಶ್ ಎಂಬವರು ಅಂಬ್ಯುಲೆನ್ಸ್ ಮೂಲಕ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಮೃತರ ಸಂಬಂಧಿ ನೆಟ್ಲ ನಿವಾಸಿ ಗೋಪಾಲ ನಾಯ್ಕ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದಾಸಕೋಡಿ : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದ್ದ ಕೂಲಿ ಕಾರ್ಮಿಕ ದಾರುಣ ಮೃತ್ಯು Rating: 5 Reviewed By: karavali Times
Scroll to Top