ಬಂಟ್ವಾಳ : ಸಾಲ ಪಡೆದ ಹಣ ನೀಡುವುದಾಗಿ ಕರೆಸಿ ಚಾಕುವಿನಿಂದ ಇರಿದ ಭೂಪ, ಪ್ರಕರಣ ದಾಖಲು - Karavali Times ಬಂಟ್ವಾಳ : ಸಾಲ ಪಡೆದ ಹಣ ನೀಡುವುದಾಗಿ ಕರೆಸಿ ಚಾಕುವಿನಿಂದ ಇರಿದ ಭೂಪ, ಪ್ರಕರಣ ದಾಖಲು - Karavali Times

728x90

18 October 2026

ಬಂಟ್ವಾಳ : ಸಾಲ ಪಡೆದ ಹಣ ನೀಡುವುದಾಗಿ ಕರೆಸಿ ಚಾಕುವಿನಿಂದ ಇರಿದ ಭೂಪ, ಪ್ರಕರಣ ದಾಖಲು

ಬಂಟ್ವಾಳ, ಅಕ್ಟೋಬರ್ 18, 2026 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿಗೆ ಸಾಲ ಪಡೆದ ಹಣ ನೀಡುವುದಾಗಿ ಅಣ್ಣ-ತಮ್ಮನನ್ನು ಕರೆಸಿದ ಆರೋಪಿ ಅಜಿತ್ ಎಂಬಾತ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಅ 17 ರಂದು ಸಂಭವಿಸಿದೆ. 

ಈ ಬಗ್ಗೆ ಬಿ ಮೂಡ ಗ್ರಾಮದ ನಿವಾಸಿ ಲೋಕೇಶ್ (27) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಸಹೋದರ ಉದಯ ಅವರಿಂದ ಆರೋಪಿ ಬಿ ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಅಜಿತ್ ಕಲ್ಲಗುಡ್ಡೆ ಎಂಬಾತ ಹಣ ಪಡೆದುಕೊಂಡಿದ್ದು, ಉದಯ ಅವರು ಈ ಬಗ್ಗೆ ಅಜಿತ್ ಅವರಲ್ಲಿ ಹಣ ವಾಪಾಸು ನೀಡುವಂತೆ ಕೇಳಿದ್ದಾರೆ. ಅ 17 ರಂದು ರಾತ್ರಿ ಆರೋಪಿ ಅಜಿತ್ ಎಂಬಾತ ಉದಯ  ಅವರಿಗೆ ಹಣ ವಾಪಾಸ್ ನೀಡುವುದಾಗಿ ತಿಳಿಸಿ ಪಲ್ಲಮಜಲಿಗೆ ಬರಲು ಹೇಳಿದ್ದಾನೆ. 

ಅದರಂತೆ ಉದಯ ಅವರು ಹಣ ಪಡೆಯುವ ಸಲುವಾಗಿ ಪಲ್ಲಮಜಲು ಜಂಕ್ಷನ್ನಿಗೆ ತೆರಳಿದ್ದಾರೆ. ಈ ಅವರ ಸಹೋದರ ಲೋಕೇಶ್ ಅವರನ್ನು ಕೂಡಾ ಅಲ್ಲಿಗೆ ಬರಲು ತಿಳಿಸಿದ ಹಿನ್ನಲೆಯಲ್ಲಿ ಲೋಕೇಶ್ ಅವರು  ಸ್ಥಳಕ್ಕೆ ತೆರಳಿದಾಗ ಆರೋಪಿ ಅಜಿತ್ ಚೂರಿಯಿಂದ ಉದಯ ಅವರಿಗೆ ಇರಿಯುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಲೋಕೇಶ್ ಅವರು ತಡೆಯಲು ಹೋದಾಗ ಆರೋಪಿ ಅವರನ್ನು ಕೂಡಾ ಅಟ್ಟಿಸಿಕೊಂಡು ಬಂದಿರುತ್ತಾನೆ. ಬಳಿಕ ಸ್ಥಳೀಯರು ಸೇರಿ ಉದಯ ಅವರನ್ನು ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಲೋಕೇಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣದ ಆರೋಪಿ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಅ 18 ರಂದು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಸಾಲ ಪಡೆದ ಹಣ ನೀಡುವುದಾಗಿ ಕರೆಸಿ ಚಾಕುವಿನಿಂದ ಇರಿದ ಭೂಪ, ಪ್ರಕರಣ ದಾಖಲು Rating: 5 Reviewed By: karavali Times
Scroll to Top