ಮಂಗಳೂರು, ಅಕ್ಟೋಬರ್ 14, 2026 (ಕರಾವಳಿ ಟೈಮ್ಸ್) : ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಕ್ಟೋಬರ್ 15 ರಂದು ಸಂಜೆ ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಗಣ್ಯರ ಭದ್ರತೆ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಅಂದು ಸಂಜೆ 4 ಗಂಟೆಯಿಂದ ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ.
ಆದ್ದರಿಂದ ಸಾರ್ವಜನಿಕರು ಕೆಳಕಂಡ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿರುವ ರಸ್ತೆಗಳು :
ಕೆ.ಪಿ.ಟಿ. ವೃತ್ತದಿಂದ ಕೆ.ಎಸ್.ಆರ್.ಟಿ.ಸಿ.-ಲಾಲ್ಬಾಗ್ ಮೂಲಕ ನಾರಾಯಣಗುರು ವೃತ್ತದವರೆಗೆ.
ನಾರಾಯಣಗುರು ವೃತ್ತದಿಂದ ಮಣ್ಣಗುಡ್ಡೆ ದುರ್ಗಾಮಹಲ್ ಜಂಕ್ಷನ್-ಕುದ್ರೋಳಿ ದೇವಸ್ಥಾನ-ಅಳಕೆ ಸೇತುವೆ-ನ್ಯೂ ಚಿತ್ರಾ ಜಂಕ್ಷನ್ ಕಡೆಗೆ ಸಾಗುವ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಮೇಲ್ಕಂಡ ರಸ್ತೆಗಳಲ್ಲಿ ಸಂಚರಿಸುವ ವಾಹನ ಚಾಲಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಸೂಚನೆಗಳು :
ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧಗಳು ಅಥವಾ ಬದಲಾವಣೆಗಳು ಇರಬಹುದಾಗಿದ್ದು, ಸಾರ್ವಜನಿಕರು ಪೆÇಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವುದು. ಗಣ್ಯರು ಸಂಚರಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಬಾರದು. ಅನಗತ್ಯವಾಗಿ ವಾಹನ ದಟ್ಟಣೆ ಉಂಟಾಗದಂತೆ ಸಹಕರಿಸಬೇಕು ಹಾಗೂ ತುರ್ತು ಪ್ರಯಾಣಗಳಿಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು. (ತುರ್ತು ವಾಹನ ಹೊರತು ಪಡಿಸಿ).
ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನ್ಯೂ-ಚಿತ್ರಾ ಜಂಕ್ಷನ್-ದುರ್ಗಾ ಮಹಲ್ ಜಂಕ್ಷನ್ ವರೆಗೆ ಸಂಚರಿಸದೇ ಅದೇ ರೀತಿ ದುರ್ಗಾಮಹಲ್ ಜಂಕ್ಷನ್ನಿನಿಂದ ನ್ಯೂಚಿತ್ರಾ ಜಂಕ್ಷನ್ ವರೆಗೆ ಸಂಚರಿಸದೇ ಪರ್ಯಾಯ ಮಾರ್ಗವನ್ನು ಉಪಯೋಗಿಸುವುದು. ದೇವಸ್ಥಾನಕ್ಕೆ ಬರುವ ಸಾರ್ವಜನಿಕರು ಮಣ್ಣಗುಡ್ಡೆ-ಗಾಂಧಿನಗರ ಅಡ್ಡ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು. ಮೇಲ್ಕಂಡ ಅವಧಿಯಲ್ಲಿ ಕುದ್ರೋಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚರಿಸಲು/ ನಿಲುಗಡೆಗೆ ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ ಎಂದು ಮಂಗಳೂರು ನಗರ ಪೆÇಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.













0 comments:
Post a Comment