ಅಬಕಾರಿ ಎಲ್‍ಪಿ.ಸಿ. ಪ್ರಕರಣಗಳ ಆರೋಪಿಗಳ ಬಂಧನ ಕಾರ್ಯಾಚರಣೆ - Karavali Times ಅಬಕಾರಿ ಎಲ್‍ಪಿ.ಸಿ. ಪ್ರಕರಣಗಳ ಆರೋಪಿಗಳ ಬಂಧನ ಕಾರ್ಯಾಚರಣೆ - Karavali Times

728x90

31 October 2026

ಅಬಕಾರಿ ಎಲ್‍ಪಿ.ಸಿ. ಪ್ರಕರಣಗಳ ಆರೋಪಿಗಳ ಬಂಧನ ಕಾರ್ಯಾಚರಣೆ

ಮಂಗಳೂರು, ಅಕ್ಟೋಬರ್ 31, 2026 (ಕರಾವಳಿ ಟೈಮ್ಸ್) : ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಕ್ಕೆ (ಎಲ್‍ಪಿಸಿ) ಸಂಬಂಧಿಸಿದಂತೆ ಮಂಗಳೂರು ಅಬಕಾರಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಕೆಲವು ಆರೋಪಿಗಳನ್ನು ಪತ್ತೆಹಚ್ಚಿದ್ದು, ಇದರಲ್ಲಿ ಜಾರ್ಜ್ ರಾಕೇಶ್ ಡಿಸೋಜ ಬಿನ್ ಫ್ರಾನ್ಸಿಸ್ಸ್ ಡಿಸೋಜ ಹೆಬ್ಬಾರ್ ಗುತ್ತು, ಉಳ್ಳಾಲ ಇವರ ವಿರುದ್ಧ 2004ರಲ್ಲಿ ಅಬಕಾರಿ ಪ್ರಕರಣವು ದಾಖಲಾಗಿತ್ತು. 

ನಂತರ ಇವರು ಹಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು ಇದರ ಗಂಭೀರತೆಯನ್ನು ಅರಿತು ಮಂಗಳೂರು ದಕ್ಷಿಣ ವಲಯ-2 ಅಬಕಾರಿ ನಿರೀಕ್ಷಕ ಮಿಲ್ಲರ್ ಡಿಸೋಜ ಅವರ ನೇತೃತ್ವದಲ್ಲಿ ಉಪನಿರೀಕ್ಷಕ ಜಯಪ್ಪ ಲಮಾಣಿ, ಪೇದೆಗಳಾದ ಮಂಜಪ್ಪ ಹಾಗೂ ಆನಂದ ಸತೀಶ್ ಅವರ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದು ಇದನ್ನು ಅರಿತ ಆರೋಪಿ ಅಕ್ಟೋಬರ್ 29 ರಂದು ನ್ಯಾಯಾಲಯಕ್ಕೆ ಶರಣಾಗಿದ್ದ. ಈ ಸಂದರ್ಭ ಆರೋಪಿ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಪ್ರಕರಣದ ಗಂಭೀರತೆ ಮತ್ತು ಆರೋಪಿಯು ಸುದೀರ್ಘ 22 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಧೀಶರು ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. 

ಇನ್ನೂ ಹಲವು ಎಲ್‍ಪಿಸಿ ಪ್ರಕರಣಗಳಿಗೆ ಸಂಬಂಧಿಸಿ ಹಳೆ ಆರೋಪಿಗಳ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಸಂಬಂಧಪಟ್ಟ ಎಲ್ಲ ಆರೋಪಿಗಳನ್ನು ಸದ್ಯದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಬಕಾರಿ ಎಲ್‍ಪಿ.ಸಿ. ಪ್ರಕರಣಗಳ ಆರೋಪಿಗಳ ಬಂಧನ ಕಾರ್ಯಾಚರಣೆ Rating: 5 Reviewed By: karavali Times
Scroll to Top