ಫಳ್ನೀರ್ : ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಿಢೀರ್ ದಾಳಿ, ಅವಧಿ ಮೀರಿದ ಆಹಾರ ಪ್ಯಾಕೆಟ್ ಸೀಝ್ - Karavali Times ಫಳ್ನೀರ್ : ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಿಢೀರ್ ದಾಳಿ, ಅವಧಿ ಮೀರಿದ ಆಹಾರ ಪ್ಯಾಕೆಟ್ ಸೀಝ್ - Karavali Times

728x90

17 October 2026

ಫಳ್ನೀರ್ : ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಿಢೀರ್ ದಾಳಿ, ಅವಧಿ ಮೀರಿದ ಆಹಾರ ಪ್ಯಾಕೆಟ್ ಸೀಝ್

ಮಂಗಳೂರು, ಅಕ್ಟೋಬರ್ 18, 2026 (ಕರಾವಳಿ ಟೈಮ್ಸ್) : ನಗರದ ಫಳ್ನೀರ್ ಜಂಕ್ಷನ್ನಿನ ಜಿ ಐ ಬೇಕರಿ ಮೇಲೆ ಅ 17 ರಂದು ದಾಳಿ ನಡೆಸಿದ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಸೀಝ್ ಮಾಡಿ ಸೀಲ್ ಮಾಡಿದ್ದಾರೆ. 

ಆರೋಗ್ಯ ಸಚಿವ ಯು ಟಿ ಖಾದರ್ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಸಿಹಿ ತಿಂಡಿ ತಿನಿಸು ತಯಾರಿಕಾ ಘಟಕ ಹಾಗೂ ಮಾರಾಟ ಮಾಡುವ ಆಹಾರೋದ್ಯಮಗಳ ಮೇಲೆ ಪರಿಶೀಲನೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾಕ್ಟರ್ ಪ್ರವೀಣ್ ಕುಮಾರ್ ಸಿ ಎಚ್ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದೆ. 

ಬೇಕರಿ ಆಹಾರ ಉತ್ಪನ್ನಗಳನ್ನು ರಿಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ನಗರದ ಫಳ್ನೀರ್ ಜಂಕ್ಷನ್ನಿನ ಜಿ.ಐ ಬೇಕರಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ಅಧಿಕಾರಿಗಳ ತಂಡ ಆಹಾರದ ಪ್ಯಾಕೆಟ್ ಗಳ ಮೇಲೆ ತಯಾರಿಕಾ ದಿನಾಂಕ, ಬಳಕೆಯ ಅವಧಿ ಮೀರುವ ದಿನಾಂಕ ಬ್ಯಾಚ್ ನಂಬರ್ ಎಫ್ ಎಸ್ ಎಸ್ ಎ ಐ ಲೈಸೆನ್ಸ್ ನಂಬರ್  ಇಲ್ಲದ ಆಹಾರ ಉತ್ಪನ್ನಗಳನ್ನು ಸೀಝ್ ಮಾಡಿ ಸೀಲ್ ಮಾಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಫಳ್ನೀರ್ : ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಿಢೀರ್ ದಾಳಿ, ಅವಧಿ ಮೀರಿದ ಆಹಾರ ಪ್ಯಾಕೆಟ್ ಸೀಝ್ Rating: 5 Reviewed By: karavali Times
Scroll to Top