ಗೃಹಲಕ್ಷ್ಮಿ ಮರು ಪರಿಶೀಲನೆ ಇನ್ನೂ ಆರಂಭ ಆಗಿಲ್ಲ : ಈಗಲೇ ಒಟಿಪಿ, ಬ್ಯಾಂಕ್ ಮಾಹಿತಿ ನೀಡದಂತೆ ಸಾರ್ವಜನಿಕರಿಗೆ ಸೂಚನೆ - Karavali Times ಗೃಹಲಕ್ಷ್ಮಿ ಮರು ಪರಿಶೀಲನೆ ಇನ್ನೂ ಆರಂಭ ಆಗಿಲ್ಲ : ಈಗಲೇ ಒಟಿಪಿ, ಬ್ಯಾಂಕ್ ಮಾಹಿತಿ ನೀಡದಂತೆ ಸಾರ್ವಜನಿಕರಿಗೆ ಸೂಚನೆ - Karavali Times

728x90

31 October 2026

ಗೃಹಲಕ್ಷ್ಮಿ ಮರು ಪರಿಶೀಲನೆ ಇನ್ನೂ ಆರಂಭ ಆಗಿಲ್ಲ : ಈಗಲೇ ಒಟಿಪಿ, ಬ್ಯಾಂಕ್ ಮಾಹಿತಿ ನೀಡದಂತೆ ಸಾರ್ವಜನಿಕರಿಗೆ ಸೂಚನೆ

ಮಂಗಳೂರು, ಅಕ್ಟೋಬರ್ 31, 2026 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆ ಕಾರ್ಯ ಸರಕಾರದ ವತಿಯಿಂದ ಇನ್ನೂ ಆರಂಭವಾಗಿರುವುದಿಲ್ಲ. ಪ್ರಸ್ತುತ ಯಾರೂ ಈ ಬಗ್ಗೆ ಒಟಿಪಿಯಾಗಲೀ, ಬ್ಯಾಂಕ್ ಮಾಹಿತಿಗಳನ್ನು ಕೇಳಿದರೆ ಸಾರ್ವಜನಿಕರು ಒದಗಿಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಸರ್ಕಾರದ ಆದೇಶ ಹಾಗೂ ನಿಗದಿತ ಕಾರ್ಯವಿಧಾನದನ್ವಯ ಕೈಗೊಳ್ಳಲಾಗುತ್ತಿದೆ. ಮರುಪರಿಶೀಲನಾ ಅರ್ಜಿಯಲ್ಲಿ ಫಲಾನುಭವಿಯ ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಫಲಾನುಭವಿಯನ್ನು ಗುರುತಿಸಿ ಒಟಿಪಿ ಮೂಲಕ ದೃಢೀಕರಿಸುವ ಸಲುವಾಗಿ ಆಧಾರ್ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿರುತ್ತದೆ. ಈ ಬಗ್ಗೆ ಇಲಾಖೆಯಿಂದ ಇನ್ನೂ ಯಾವುದೇ ಮರುಪರಿಶೀಲನಾ ಪ್ರಕ್ರಿಯೆ ಪ್ರಾರಂಭವಾಗಿರುವುದಿಲ್ಲ. ಕೆಲವೊಂದು ಕಡೆ ಅನಧಿಕೃತವಾಗಿ ಗೃಹಲಕ್ಷ್ಮಿ ಸಮೀಕ್ಷೆಯ ಬಗ್ಗೆ ಒಟಿಪಿ ಹಾಗೂ ಬ್ಯಾಂಕ್ ಮಾಹಿತಿ ಕೇಳಿದಲ್ಲಿ ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಗೃಹಲಕ್ಷ್ಮಿ ಮರು ಪರಿಶೀಲನೆ ಇನ್ನೂ ಆರಂಭ ಆಗಿಲ್ಲ : ಈಗಲೇ ಒಟಿಪಿ, ಬ್ಯಾಂಕ್ ಮಾಹಿತಿ ನೀಡದಂತೆ ಸಾರ್ವಜನಿಕರಿಗೆ ಸೂಚನೆ Rating: 5 Reviewed By: karavali Times
Scroll to Top