ಪುತ್ತೂರು, ಅಕ್ಟೋಬರ್ 19, 2026 (ಕರಾವಳಿ ಟೈಮ್ಸ್) : ಲಾಡ್ಜ್ ನಲ್ಲಿ ಕೆಲಸ ಮಾಡುವ ಯುವಕನೋರ್ವನಿಗೆ ಮೂವರು ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದ ಯುವಕ. ಆರೋಪಿಗಳನ್ನು ಫಾರೂಕ್, ಸೋನು ಹಾಗೂ ಇಶಾನ್ ಎಂದು ಹೆಸರಿಸಲಾಗಿದೆ. ರಿಫಾಯಿ ಅವರು ಪುತ್ತೂರಿನ ಲಾಡ್ಜ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಅ 17 ರಂದು ರಾತ್ರಿ ರಿಫಾಯಿ ಅವರು ಸದ್ರಿ ಲಾಡ್ಜ್ ನಲ್ಲಿದ್ದಾಗ ಆರೋಪಿಗಳಾದ ಫಾರೂಕ್, ಸೋನು ಹಾಗೂ ಇಷಾನ್ ಎಂಬವರುಗಳು ಬಂದು ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment