ಕರಾವಳಿ ಅಭಿವೃದ್ದಿ ಮಂಡಳಿ ವತಿಯಿಂದ ಜವಳಿ ರಫ್ತು ಕಾರ್ಯಾಗಾರ - Karavali Times ಕರಾವಳಿ ಅಭಿವೃದ್ದಿ ಮಂಡಳಿ ವತಿಯಿಂದ ಜವಳಿ ರಫ್ತು ಕಾರ್ಯಾಗಾರ - Karavali Times

728x90

22 October 2026

ಕರಾವಳಿ ಅಭಿವೃದ್ದಿ ಮಂಡಳಿ ವತಿಯಿಂದ ಜವಳಿ ರಫ್ತು ಕಾರ್ಯಾಗಾರ

ಮಂಗಳೂರು, ಅಕ್ಟೋಬರ್ 22, 2026 (ಕರಾವಳಿ ಟೈಮ್ಸ್) : ರಫ್ತು ಇಂದಿನ ಅನಿವಾರ್ಯತೆ ಆಗಿದ್ದು, ಜವಳಿ ಕ್ಷೇತ್ರವು ಆ ದಿಸೆಯಲ್ಲಿ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಕೃಷಿಯನ್ನು ಬಿಟ್ಟರೆ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿದ ಕ್ಷೇತ್ರ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿಯಲ್ಲಿ ನಡೆದ ಜವಳಿ ರಫ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಮಾತನಾಡಿ, ಆರ್ಥಿಕ ಮುಗ್ಗಟ್ಟಿನಿಂದ ದೇಶವನ್ನು ಕಾಪಾಡಲು ರಫ್ತು ಅನಿವಾರ್ಯ ಮತ್ತು ದೇಶೀಯ ಉತ್ಪನ್ನಗಳ ವ್ಯಾಪಕ ಬಳಕೆಗೆ ಎಲ್ಲರೂ ತೊಡಗಬೇಕು ಎಂದರು. 

ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಸುರಪೂರ ಮಾತನಾಡಿ, ವ್ಯಾಪಕ ಪೆಟ್ರೋಲಿಯಮ್ ಉತ್ಪನ್ನಗಳ ಆಮದಿನಿಂದ ಆಗುತ್ತಿರುವ ವ್ಯತ್ಯಾಸವನ್ನು ಜವಳಿ ರಫ್ತು ಸರಿದೂಗಿಸುವ ನಿಟ್ಟಿನಲ್ಲಿ, ಜವಳಿ ಮಂತ್ರಾಲಯ, ಭಾರತ ಸರ್ಕಾರವು, ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯು ಎಸ್ ಡಿ 100 ಬಿಲಿಯನ್ ಎಕ್ಸ್ ಪೋರ್ಟ್ ಹೊಂದಿದ್ದು ಜವಳಿ ರಫ್ತಿಗೆ ಉತ್ತೇಜನ ನೀಡಲಾಗುತ್ತಿದೆ. ಆದ್ದರಿಂದ ಜವಳಿ ರಫ್ತಿಗೆ ಉದ್ಯಮಿಗಳು ಮುಂದೆ ಬರಬೇಕು ಎಂದು ತಿಳಿಸಿದರು.

ಅಂಚೆ ಇಲಾಖೆಯ ಗೋಪಿನಾಥ, ಖಿಣಿ, ಇಸಿಜಿಸಿಯ ವಿಕಾಸ್ ಕುಮಾರ್, ಡಾ. ಸತ್ಯನಾರಾಯಣ ಶೇಷಗಿರಿ, ಸತೀಶ ಕೋಟಾ, ಚಂದ್ರಶೇಖರ ವಿ. ಪಟಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಚರಣ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿ ಅಭಿವೃದ್ದಿ ಮಂಡಳಿ ವತಿಯಿಂದ ಜವಳಿ ರಫ್ತು ಕಾರ್ಯಾಗಾರ Rating: 5 Reviewed By: karavali Times
Scroll to Top