ಕಣ್ಣೂರು ವಾರ್ಡ್ : 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ - Karavali Times ಕಣ್ಣೂರು ವಾರ್ಡ್ : 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ - Karavali Times

728x90

1 October 2026

ಕಣ್ಣೂರು ವಾರ್ಡ್ : 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ

ಮಂಗಳೂರು, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನ ವೀರನಗರ ರಮೇಶ್ ಭಂಡಾರಿ ಮನೆಯಿಂದ ಬಾಬು ಅವರ ಮನೆಯವರೆಗೆ ಹಾಗೂ ಅಂಗನವಾಡಿಯಿಂದ ಕಟ್ಟೆ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು. 

ಅನೇಕ ವರ್ಷಗಳಿಂದ ಈ ರಸ್ತೆಯು ಕಾಂಕ್ರೀಟೀಕರಣಗೊಳ್ಳಬೇಕು ಎಂಬುದು ಈ ಭಾಗದ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಚಂದ್ರಾವತಿ ವಿಶ್ವನಾಥ್ ಹಾಗೂ ಸ್ಥಳೀಯ ಪ್ರಮುಖರ ಬೇಡಿಕೆಯಾಗಿತ್ತು. ಅದರಂತೆ ಅನುದಾನಗಳನ್ನು ಹೊಂದಿಸಿಕೊಂಡು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು. 

ಈ ಸಂದರ್ಭ ಪ್ರಮುಖರಾದ ಸುಂದರ ಪೂಜಾರಿ, ಮಹಾಬಲ ಶೆಟ್ಟಿ, ಯಶವಂತ್ ಅಮೀನ್, ಸಂದೀಪ್ ಶೆಟ್ಟಿ, ಚರಣ್, ಮನೋಜ್ ವೀರನಗರ, ವಿಶು, ಬಾಲಕೃಷ್ಣ, ಶಾಶ್ವಿತ್ ಪೇರ್ಲ, ಗಣೇಶ್ ಶೆಟ್ಟಿ, ಕೇಶವ ಪೂಜಾರಿ, ಶೇಖರ ಪೂಜಾರಿ, ವಸಂತ್ ಶೆಟ್ಟಿ, ವಿಶ್ವನಾಥ್, ಪ್ರವೀಣ್, ದಾಮೋದರ್, ದೇವದಾಸ್ ಶೆಟ್ಟಿ ಪ್ರಕಾಶ್, ಪ್ರಶಾಂತ್, ಸುನಿತಾ, ಜಯಂತಿ ಶೆಟ್ಟಿ, ವನಿತಾ ಶೆಟ್ಟಿ, ಅರುಣಾ, ಮಮತ, ರಾಜೀವಿ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕಣ್ಣೂರು ವಾರ್ಡ್ : 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ Rating: 5 Reviewed By: karavali Times
Scroll to Top