ಮೊಡಂಕಾಪು : ನಿವೃತ್ತ ಮುಖ್ಯ ಶಿಕ್ಷಕಿ ತೆರೇಜಾ ಅವರಿಗೆ ಸಂಸ್ಥೆಯ ವತಿಯಿಂದ ಗೌರವಪೂರ್ವಕ ಬೀಳ್ಕೊಡುಗೆ - Karavali Times ಮೊಡಂಕಾಪು : ನಿವೃತ್ತ ಮುಖ್ಯ ಶಿಕ್ಷಕಿ ತೆರೇಜಾ ಅವರಿಗೆ ಸಂಸ್ಥೆಯ ವತಿಯಿಂದ ಗೌರವಪೂರ್ವಕ ಬೀಳ್ಕೊಡುಗೆ - Karavali Times

728x90

1 October 2026

ಮೊಡಂಕಾಪು : ನಿವೃತ್ತ ಮುಖ್ಯ ಶಿಕ್ಷಕಿ ತೆರೇಜಾ ಅವರಿಗೆ ಸಂಸ್ಥೆಯ ವತಿಯಿಂದ ಗೌರವಪೂರ್ವಕ ಬೀಳ್ಕೊಡುಗೆ

ಬಂಟ್ವಾಳ, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಮೊಡಂಕಾಪು ಇನ್ಫಂಟ್ ಜೀಸಸ್ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಸತತ 42 ವರ್ಷಗಳ ಕಾಲ ಶಿಕ್ಷಕರಾಗಿ, ಕಳೆದ 4 ವರ್ಷಗಳ ಕಾಲ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ತೆರೇಜಾ ಲೆವ್ರೌಂತಿ ಡಿಮೆಲ್ಲೋ ಅವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಡಳಿತ ಮಂಡಳಿ ಜೊತೆ ಕಾರ್ಯದರ್ಶಿ ಅತಿ ವಂದನೀಯ ಸ್ವಾಮಿ ವಿಕ್ಟರ್ ಡಿಸೋಜ ಅವರು, ತೆರೆಜಾ ಮೇಡಂ ಅವರ ಸುದೀರ್ಘ 42 ವರ್ಷಗಳ ನಿಸ್ವಾರ್ಥ ಸೇವೆ ಶಾಲೆಯ ಬೆಳವಣಿಗೆಗೆ ಶಕ್ತಿ ನೀಡಿದೆ. ಅವರ ಶಿಸ್ತು ಮತ್ತು ಕರ್ತವ್ಯನಿಷ್ಠೆ ಪ್ರತಿಯೊಬ್ಬರಿಗೂ ಮಾದರಿ ಎಂದರು. 

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅರುಣ್ ರೋಶನ್ ಡಿಸೋಜ, ಕಾರ್ಯದರ್ಶಿ ರಮಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ನಿಯೋಜಿತ ಮುಖ್ಯೋಪಾಧ್ಯಾಯ ಸುನಿಲ್ ಫ್ರಾನ್ಸಿಸ್ ಲೂವಿಸ್, ವಿದ್ಯಾರ್ಥಿ ನಾಯಕಿ ಫಾತಿಮಾ ಅಫ್ರಾ, ಪೋಷಕರ ಪರವಾಗಿ ಶ್ರೀಮತಿ ಮಲ್ಲಿಕಾ ಅವರು ಶಿಕ್ಷಕಿ ಶ್ರೀಮತಿ ತೆರೆಜಾ ಅವರ ಕಾರ್ಯವೈಖರಿ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. 

ಇದೇ ವೇಳೆ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಶಿಕ್ಷಕರಾದ ರೀನಾ ಡಿಮೆಲ್ಲೋ ಸ್ವಾಗತಿಸಿ, ಲವೀನಾ ಡಿಸೋಜ ವಂದಿಸಿದರು. ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮೊಡಂಕಾಪು : ನಿವೃತ್ತ ಮುಖ್ಯ ಶಿಕ್ಷಕಿ ತೆರೇಜಾ ಅವರಿಗೆ ಸಂಸ್ಥೆಯ ವತಿಯಿಂದ ಗೌರವಪೂರ್ವಕ ಬೀಳ್ಕೊಡುಗೆ Rating: 5 Reviewed By: karavali Times
Scroll to Top