ಪ್ರಧಾನಿ ಮೋದಿ ಅವರ 25 ವರ್ಷಗಳ ಜನಸೇವಾ ಸಂಕಲ್ಪ : ಮಂಗಳೂರು ಬಿಜೆಪಿ ವತಿಯಿಂದ ರಂಗೋಲಿ ಕಾರ್ಯಕ್ರಮ - Karavali Times ಪ್ರಧಾನಿ ಮೋದಿ ಅವರ 25 ವರ್ಷಗಳ ಜನಸೇವಾ ಸಂಕಲ್ಪ : ಮಂಗಳೂರು ಬಿಜೆಪಿ ವತಿಯಿಂದ ರಂಗೋಲಿ ಕಾರ್ಯಕ್ರಮ - Karavali Times

728x90

9 October 2026

ಪ್ರಧಾನಿ ಮೋದಿ ಅವರ 25 ವರ್ಷಗಳ ಜನಸೇವಾ ಸಂಕಲ್ಪ : ಮಂಗಳೂರು ಬಿಜೆಪಿ ವತಿಯಿಂದ ರಂಗೋಲಿ ಕಾರ್ಯಕ್ರಮ

ಮಂಗಳೂರು, ಅಕ್ಟೋಬರ್ 10, 2026 (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ನಿರಂತರ ಜನಸೇವೆಯ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದೊಂದಿಗೆ ವಿಕಸಿತ ಭಾರತ ಕಲ್ಪನೆಯಡಿ ಬೃಹದಾಕಾರವಾಗಿ ರಚಿಸಿದ “ರಾಷ್ಟ್ರದೊಂದಿಗೆ ರಂಗೋಲಿ ಕಾರ್ಯಕ್ರಮ” ಕುದ್ರೋಳಿ ಭಗವತಿ ದೇವಸ್ಥಾನದ ಕೂಟಕ್ಕಳ ಸಭಾಭವನದಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಇದು ಕೇವಲ ರಂಗೋಲಿಯಲ್ಲ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಕನಸಿಗನುಗುಣವಾದ ವಿಶಿಷ್ಟ ರಾಷ್ಟ್ರ ಪ್ರೇಮದ ರಂಗೋಲಿಯಾಗಿದೆ ಎಂದರು. ಸಂಸದ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಭಾರತವು ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ ಸಾಧಿಸುತ್ತಿದೆ. ಅವರ ಕಾರ್ಯಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲದ್ದು ಎಂದರು.

ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಸುಜೀತ್ ಪ್ರತಾಪ್, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಂದನ್ ಮಲ್ಯ, ಮಂಜುಳಾ ರಾವ್, ವಸಂತ ಪೂಜಾರಿ, ಸಂಧ್ಯಾ ವೆಂಕಟೇಶ್, ವಿಜಯ ಕುಮಾರ್ ಶೆಟ್ಟಿ, ದೀಪಕ್ ಪೈ, ಗೌತಮ್ ಕೋಡಿಕಲ್, ಜಯ ಕುಮಾರ್, ಅಮಿತ್ ರಾಜ್, ಶಬರೀಶ್, ಮೋಹನ್ ಪೂಜಾರಿ, ರವಿಚಂದ್ರ, ಪ್ರವೀಣ್ ನಿಡ್ಡೆಲ್, ಉದಯ್ ಡಿಸೋಜಾ, ಪ್ರಶಾಂತ್ ಮರೋಳಿ, ಪೂರ್ಣಿಮ ರಾವ್, ಲೀಲಾವತಿ ಪ್ರಕಾಶ್, ಚಂದ್ರಾವತಿ ವಿಶ್ವನಾಥ್, ಗಣೇಶ್ ಕುಲಾಲ್, ಶೋಭಾ ಪೂಜಾರಿ, ವೀಣಾ ಮಂಗಳ ಹಾಗೂ ರಂಗೋಲಿಯನ್ನು ರಚಿಸಿದ ಸತೀಶ್ಚಂದ್ರ ಮತ್ತು ಶ್ರೀಮತಿ ವೀಣಾ ಐತಾಳ್ ಮೊದಲಾದವರು ಭಾಗವಹಿಸಿದ್ದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪ್ರಧಾನಿ ಮೋದಿ ಅವರ 25 ವರ್ಷಗಳ ಜನಸೇವಾ ಸಂಕಲ್ಪ : ಮಂಗಳೂರು ಬಿಜೆಪಿ ವತಿಯಿಂದ ರಂಗೋಲಿ ಕಾರ್ಯಕ್ರಮ Rating: 5 Reviewed By: karavali Times
Scroll to Top