ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಧನ ವಿತರಿಸಿದ ಶಂಭೂರು ಎ.ಎಂ.ಆರ್. ಸಂಸ್ಥೆ - Karavali Times ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಧನ ವಿತರಿಸಿದ ಶಂಭೂರು ಎ.ಎಂ.ಆರ್. ಸಂಸ್ಥೆ - Karavali Times

728x90

1 October 2026

ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಧನ ವಿತರಿಸಿದ ಶಂಭೂರು ಎ.ಎಂ.ಆರ್. ಸಂಸ್ಥೆ

ಬಂಟ್ವಾಳ, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆ ನಿವಾಸಿ ಕೃಷ್ಣ ಕುಲಾಲ್ ಅವರು ಶಂಭೂರಿನ ಎಎಂಆರ್ ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್‍ಗೆ ವಿದ್ಯುತ್ ಸರಬರಾಜು ಮಾಡುವ ಎಚ್ ಟಿ ವಿದ್ಯುತ್ ತಂತಿ ತಗುಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬಕ್ಕೆ ಎಎಂಆರ್ ಸಂಸ್ಥೆಯ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರ ಮೂಲಕ ಹಸ್ತಾಂತರಿಸಲಾಯಿತು. 

ಈ ಸಂದರ್ಭ ಪ್ರಮುಖರಾದ ಗೋವಿಂದ ಪ್ರಭು, ಸುಲೋಚನಾ ಜಿ ಕೆ ಭಟ್, ಹರಿಕೃಷ್ಣ ಬಂಟ್ವಾಳ್, ಮಚ್ಚೇಂದ್ರ ಸಾಲ್ಯಾನ್, ಕೇಶವ ದೈಪಲ, ಸುದರ್ಶನ್ ಬಜ, ಚೆನ್ನಪ್ಪ ಕೋಟ್ಯಾನ್, ದೇವಪ್ಪ ಪೂಜಾರಿ, ಮಾಧವ ಮಾವೆ, ದಿನೇಶ್ ಅಮ್ಟೂರು ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಧನ ವಿತರಿಸಿದ ಶಂಭೂರು ಎ.ಎಂ.ಆರ್. ಸಂಸ್ಥೆ Rating: 5 Reviewed By: karavali Times
Scroll to Top