ಸರಕಾರಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೂ ‘ಕರ್ತವ್ಯ ಆಪ್’ ಹಾಜರಾತಿ ಕಡ್ಡಾಯಗೊಳಿಸಿ ಸರಕಾರದಿಂದ ಮಹತ್ವದ ಆದೇಶ - Karavali Times ಸರಕಾರಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೂ ‘ಕರ್ತವ್ಯ ಆಪ್’ ಹಾಜರಾತಿ ಕಡ್ಡಾಯಗೊಳಿಸಿ ಸರಕಾರದಿಂದ ಮಹತ್ವದ ಆದೇಶ - Karavali Times

728x90

18 October 2026

ಸರಕಾರಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೂ ‘ಕರ್ತವ್ಯ ಆಪ್’ ಹಾಜರಾತಿ ಕಡ್ಡಾಯಗೊಳಿಸಿ ಸರಕಾರದಿಂದ ಮಹತ್ವದ ಆದೇಶ

ಬೆಂಗಳೂರು, ಅಕ್ಟೋಬರ್ 18, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಇನ್ಮುಂದೆ ‘ಕರ್ತವ್ಯ’ ಆಪ್ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.  

ಇಲ್ಲಿಯವರೆಗೆ ಖಾಯಂ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ‘ಕರ್ತವ್ಯ’ ಆಪ್ ಅನ್ನು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ವಿಸ್ತರಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ.

ಕಡ್ಡಾಯ ನೋಂದಣಿ : 

ಸರ್ಕಾರದ ಅಧೀನದಲ್ಲಿರುವ ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು 2026ರ ನವೆಂಬರ್ 25ರೊಳಗಾಗಿ ‘ಕರ್ತವ್ಯ’ ಆಪ್ ನಲ್ಲಿ ನೋಂದಾಯಿಸಿಕೊಳ್ಳಲು ಆಯಾ ಇಲಾಖಾ ಮುಖ್ಯಸ್ಥರಿಗೆ ಮತ್ತು ಕಚೇರಿಗಳಿಗೆ ಸೂಚಿಸಲಾಗಿದೆ.  

ಡಿಸೆಂಬರ್ 1 ರಿಂದ ಡಿಜಿಟಲ್ ಹಾಜರಾತಿ : 

2026ರ ಡಿಸೆಂಬರ್ 1ರಿಂದ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ಹಾಜರಾತಿಯನ್ನು ಕೇವಲ ‘ಕರ್ತವ್ಯ’ ಆಪ್ ನಲ್ಲಿ ಮಾತ್ರವೇ ದಾಖಲಿಸಬೇಕು.  

ವೇತನ ಹಾಗೂ ಬಿಲ್ ಪಾವತಿಗೆ ‘ಕರ್ತವ್ಯ’ ವರದಿ ಕಡ್ಡಾಯ :

2027ರ ಜನವರಿ 1ರಿಂದ ಅನ್ವಯವಾಗುವಂತೆ, ಗುತ್ತಿಗೆ ನೌಕರರ ವೇತನ ಹಾಗೂ ಹೊರಗುತ್ತಿಗೆ ಏಜೆನ್ಸಿಗಳ ಬಿಲ್ ಗಳನ್ನು ‘ಕರ್ತವ್ಯ’ ಆಪ್ ನಿಂದ ಪಡೆದ ಹಾಜರಾತಿ ವರದಿಯ ಆಧಾರದ ಮೇಲೆ ಮಾತ್ರ ಬಿಡುಗಡೆ ಮಾಡಲಾಗುವುದು. ಆಪ್ ನಲ್ಲಿ ಹಾಜರಾತಿ ದಾಖಲಾಗದಿದ್ದರೆ ಯಾವುದೇ ಪಾವತಿ ಮಾಡದಂತೆ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳಿಗೆ (ಡಿಡಿಒ) ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಪಾರದರ್ಶಕತೆ ಮತ್ತು ಏಕರೂಪತೆ :

ಪ್ರಸ್ತುತ ಕೈಬರಹ ಅಥವಾ ಇತರೆ ಪ್ರತ್ಯೇಕ ವ್ಯವಸ್ಥೆಗಳ ಮೂಲಕ ಹಾಜರಾತಿ ನಿರ್ವಹಿಸಲಾಗುತ್ತಿತ್ತು. ವೇತನವನ್ನು ಸರ್ಕಾರದ ಅನುದಾನದಿಂದಲೇ ಭರಿಸುತ್ತಿರುವುದರಿಂದ ವಿಶ್ವಾಸಾರ್ಹತೆ ಮತ್ತು ಏಕರೂಪತೆ ತರಲು ಈ ನೂತನ ವ್ಯವಸ್ಥೆ ತರಲಾಗಿದೆ.  

ಈ ಆದೇಶದ ಪಾಲನೆಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಅಧಿಕಾರಿಗಳನ್ನೇ ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸರಕಾರಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೂ ‘ಕರ್ತವ್ಯ ಆಪ್’ ಹಾಜರಾತಿ ಕಡ್ಡಾಯಗೊಳಿಸಿ ಸರಕಾರದಿಂದ ಮಹತ್ವದ ಆದೇಶ Rating: 5 Reviewed By: karavali Times
Scroll to Top