ಬಂಟ್ವಾಳ, ಅಕ್ಟೋಬರ್ 27, 2026 (ಕರಾವಳಿ ಟೈಮ್ಸ್) : ಬಡಗಬೆಳ್ಳೂರು ಗ್ರಾಮದ ತಾರಾಬರಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಶಿಲಾನ್ಯಾಸ ನೆರವೇರಿಸಿದರು.
ಸೇತುವೆ ನಿರ್ಮಾಣ ಕಾಮಗಾರಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಉತ್ತಮ ಗುಣಮಟ್ಟದ ಸೇತುವೆ ನಿರ್ಮಾಣವಾಗುವ ವಿಶ್ವಾಸವಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಈ ಸಂದರ್ಭ ಪ್ರಮುಖರಾದ ದೇವಪ್ಪ ಪೂಜಾರಿ, ಸುದರ್ಶನ್ ಬಜ, ಪ್ರಕಾಶ್ ಆಳ್ವ, ರಮೇಶ ಪೂಜಾರಿ ಬಟ್ಟಾಜೆ, ನಂದಾರಾಮ ರೈ, ಸವಿತಾ ಶೆಟ್ಟಿ, ಮೋಹನದಾಸ್ ಕೊಟ್ಟಾರಿ, ಮಮತಾ ಪದ್ಮನಾಭ, ಉಮೇಶ್ ಶೆಟ್ಟಿ ಪರಿಮೊಗರು, ರಘುವೀರ್ ಆಚಾರ್ಯ, ರಾಧಾಕೃಷ್ಣ ತಂತ್ರಿ, ಕಾರ್ತಿಕ್ ಬಳ್ಳಾಲ್, ಮೋಹನ್ ಮೇಲಾಂಟ, ಸುರೇಶ್ ಕೋಟ್ಯಾನ್, ತಿಮ್ಮಪ್ಪ ರೈ, ಪ್ರಸಾದ್ ರೈ, ರವೀಂದ್ರ ಮೇಲಾಂಟ, ತಿಮ್ಮಪ್ಪ ಶೆಟ್ಟಿ, ಪ್ರಸನ್ನ ಭಂಡಾರಿ, ಜಗದೀಶ ರೈ, ಜಗದೀಶ ಇಂಜಿನಿಯರ್, ದಿನೇಶ್ ಪೂಜಾರಿ ಬಟ್ಟಾಜೆ, ಶಶಿಕಿರಣ್ ಪೂಜಾರಿ ಹಾಗೂ ಗುತ್ತಿಗೆದಾರ ಧೀರಜ್ ನಾಯ್ಕ್ ಉಪಸ್ಥಿತರಿದ್ದರು.













0 comments:
Post a Comment