ಮಂಗಳೂರು, ಅಕ್ಟೋಬರ್ 05, 2026 (ಕರಾವಳಿ ಟೈಮ್ಸ್) : ಹುಲಿ ವೇಷ ತರಬೇತಿಗೆಂದು ಮಂಗಳೂರಿಗೆ ಬಂದ ಅಪ್ರಾಪ್ತ ಬಾಲಕ ಪಣಂಬೂರು ಬೀಚಿನಲ್ಲಿ ನೀರಿನಲ್ಲಿ ಮುಳುಗಿ ಕಾಣೆಯಾದ ಘಟನೆ ಅ 4 ರಂದು ಸಂಭವಿಸಿದೆ.
ನೀರಿನಲ್ಲಿ ಕೊಚ್ಚಿ ಹೋದ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ರೆಂಕೆದ ಗುತ್ತು, ಕಸಬಾ ಗ್ರಾಮ ಮೂಲದ ಶ್ರೇಯಸ್ ಎಸ್ ಕುಂಬಾರ (14) ಎಂದು ಹೆಸರಿಸಲಾಗಿದೆ. ಶ್ರೇಯಸ್ ತನ್ನ 4 ಜನ ಅಪ್ರಾಪ್ತ ಸ್ನೇಹಿತರ ಜೊತೆ ಅ 4 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕುವ ತರಬೇತಿಗಾಗಿ ಮಂಗಳೂರಿಗೆ ಬಂದವರು ತರಬೇತಿ ಮುಗಿದ ನಂತರ ಶ್ರೇಯಸ್ ಹಾಗೂ ಆತನ ಸ್ನೇಹಿತರು ಸ್ಟೇಟ್ ಬ್ಯಾಂಕಿನಿಂದ ಪಣಂಬೂರು ಬೀಚಿಗೆ ಬಂದು, ಸಂಜೆ ಸುಮಾರು 4.30 ರಿಂದ 5 ಗಂಟೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು. ಸಂಜೆ ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಶ್ರೇಯಸ್ ನೀರಿನಲ್ಲಿ ಮುಳುಗಿ, ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಈತನು ಕಾಣೆಯಾದ ವಿಷಯವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಶ್ರೇಯಸ್ ಮನೆಯವರಿಗೆ ತಿಳಿಸದೇ ಇದ್ದು, ಅ 5 ರಂದು ಬೆಳಿಗ್ಗೆ ಶ್ರೇಯಸ್ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಅದರಂತೆ ಕಾಣೆಯಾದ ಬಾಲಕನ ತಂದೆ ಸೇಷಪ್ಪ ಅವರು ನೀಡಿದ ದೂರಿನಂತೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದ ಬಾಲಕನ ಪತ್ತೆಯ ಬಗ್ಗೆ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಮತ್ತು ಸಮುದ್ರ ವ್ಯಾಪ್ತಿ ಹೊಂದಿರುವ ಠಾಣೆಗಳಿಗೆ ಮಾಹಿತಿ ನೀಡಿ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ, ಹಾಗೂ ಲೈಫ್ ಗಾರ್ಡ್, ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರ ಮೂಲಕ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












0 comments:
Post a Comment