ಬಂಟ್ವಾಳ, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ಮುಂಡಕೋಡಿ ಎಂಬಲ್ಲಿನ ನೇತ್ರಾವತಿ ನದಿಯಿಂದ ಮರಳು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಲಾರಿ ಸಹಿತ ಮರಳನ್ನು ವಶಪಡಿಸಿಕೊಂಡ ಘಟನೆ ಅ 8 ರಂದು ನಡೆದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ದುರ್ಗಪ್ಪ ಎಚ್ ಕಲಘಟಗಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು, ದಾಳಿ ವೇಳೆ ಆರೋಪಿಗಳಾದ ಮಂಜಲ್ಪಾದೆ ನಿವಾಸಿಗಳಾದ ಸುಕೇಶ್, ಪ್ರಶಾಂತ್ ಹಾಗೂ ರಾಕೇಶ್ ಎಂಬವರು ಪರಾರಿಯಾಗಿದ್ದು ಲಾರಿ ಚಾಲಕ ಸಹಿತ ಸುಮಾರು 6 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.














0 comments:
Post a Comment