ಬಂಟ್ವಾಳ, ನವಂಬರ್ 20, 2026 (ಕರಾವಳಿ ಟೈಮ್ಸ್) : ಅಮ್ಟೂರಿನ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಲಕ್ಷ ದೀಪೆÇೀತ್ಸವದ ಪ್ರಯುಕ್ತ ನವೆಂಬರ್ 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ನಿಟಿಲಾಕ್ಷ ಲಕ್ಷ ದೀಪೆÇೀತ್ಸವ ಸೇವಾ ಸಮಿತಿ ಅಮ್ಟೂರು ಹಾಗೂ ಹರೇ ಕೃಷ್ಣ ಭಕ್ತ ವೃಂದ ಅಮ್ಟೂರು ಇವರ ಜಂಟಿ ಆಶ್ರಯದಲ್ಲಿ ಅಮ್ಟೂರು ಕಟ್ಟೆಯ ಬಳಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸೂರ್ಯೋದಯದಿಂದ ಭಜನ ಸಂಕೀರ್ತನೆ ಆಯೋಜಿಸಲಾಗಿದೆ. ರಾತ್ರಿ ದೇವರ ಕಟ್ಟೆ ಪೂಜೆ ಸಂಪನ್ನಗೊಳ್ಳುವವರೆಗೆ ನಿರಂತರವಾಗಿ ಭಜನ ಸಂಕೀರ್ತನೆ ಮತ್ತು ರಾತ್ರಿ 8 ಗಂಟೆಗೆ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಕಟ್ಟೆ ಪೂಜೆ ಭಕ್ತಿ ಭಾವದಿಂದ ನೆರವೇರಲಿದೆ ಎಂದು ಶ್ರೀ ನಿಟಿಲಾಕ್ಷ ಲಕ್ಷ ದೀಪೆÇೀತ್ಸವ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
19 November 2026
- Blogger Comments
- Facebook Comments
Subscribe to:
Post Comments (Atom)












0 comments:
Post a Comment